ಅಮೆರಿಕ ಅಧ್ಯಕ್ಷ ಜೋ ಬೈಡನ್ (JOE BIDEN ) ಪತ್ನಿ ಜಿಲ್ ಬೈಡನ್ ಭಾರತೀಯ ಮೂಲದ ಅಮೆರಿಕ ಉಫಾಧ್ಯಕ್ಷೆ ಕಮಲಾ ಹ್ಯಾರಿಸ್(KAMALA HARISH) ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ (JOE BIDEN ) ಪತ್ನಿ ಜಿಲ್ ಬೈಡನ್ ಭಾರತೀಯ ಮೂಲದ ಅಮೆರಿಕ ಉಫಾಧ್ಯಕ್ಷೆ ಕಮಲಾ ಹ್ಯಾರಿಸ್(KAMALA HARISH) ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ತಮ್ಮ ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್ ಅವರನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಪತಿಯ ಈ ಆಯ್ಕೆ ತಮಗೆ ಇಷ್ಟವಾಗಲಿಲ್ಲ ಎಂದು ಜಿಲ್ ಬೈಡನ್ ಹೇಳಿದ್ದಾಗೆ ಪುಸ್ತಕವೊಂದರಲ್ಲಿ ವರದಿ ಮಾಡಲಾಗಿದೆ. This Will Not Pass: Trump, Biden, and the Battle for America’s Future ಎಂಬ ಪುಸ್ತಕದಲ್ಲಿ ಕಮಲಾ ಹ್ಯಾರಿಸ್ ಬಗ್ಗೆ ಜಿಲ್ ಬೈಡನ್ ಅಸಮಾಧಾನ ಹೊರ ಹೊಕಿದ್ದಾರೆ.
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ನೇಮಕವಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲೂ ಕಮಲಾ ಹ್ಯಾರಿಸ್ ನನ್ನ ಉತ್ತರಾಧಿಕಾರಿ ಎಂದು ಈಗಾಗಲೇ ಜೋ ಬೈಡನ್ ಘೋಷಣೆ ಮಾಡಿದ್ದಾರೆ. ಆದರೆ ಈಗ ಈ ಪುಸ್ತಕದ ಪ್ರಕಾರ, ಮೊದಲ ಅವಧಿಯಲ್ಲಿ ಕಮಲಾ ಹ್ಯಾರಿಸ್ರನ್ನು ಆಯ್ಕೆ ಮಾಡಿ, ನಂತರ ಅವರು ಉಪಾಧ್ಯಕ್ಷರಾಗಿದ್ದು ಜಿಲ್ ಬೈಡನ್ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದನ್ನು ಓದಿ ;- ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಸಿನಿಮಾಗೆ ತೊಂದರೆಯಿಲ್ಲ- ಶಿವರಾಜ್ ಕುಮಾರ್
2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ( PRESIDENTIAL ELECTION ) ಜೋ ಬೈಡನ್ ತಮ್ಮ ಉತ್ತರಾಧಿಕಾರಿಯನ್ನಾಗಿ ಕಮಲಾ ಹ್ಯಾರಿಸ್ರನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ಡೆಮಾಕ್ರಟಿಕ್ ಪಕ್ಷವೇ ಗೆದ್ದು, ಟ್ರಂಪ್ ಆಡಳಿತ ಕೊನೆಗೊಂಡಿತು. ಜೋ ಬೈಡನ್ ಅಧ್ಯಕ್ಷರಾದರೆ, ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾದರು. ಈ ಬಗ್ಗೆ ಜಿಲ್ ಬೈಡನ್ ಪ್ರತಿಕ್ರಿಯೆ ನೀಡಿ, ಈ ಅಮೆರಿಕದಲ್ಲಿ ಲಕ್ಷಾಂತರ ಜನರಿದ್ದರು. ಆದರೆ ಅವರೆಲ್ಲರನ್ನೂ ಬಿಟ್ಟು, ಒಂದು ಕಾಲದಲ್ಲಿ ಜೋ ಬೈಡನ್ ವಿರುದ್ಧವೇ ಕಟು ಟೀಕೆ ಮಾಡಿ, ಅವರನ್ನು ವ್ಯಂಗ್ಯ ಮಾಡಿದ್ದ ಕಮಲಾ ಹ್ಯಾರಿಸ್ರನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಟಿ. ವಿ ಶೋವೊಂದರಲ್ಲಿ ಕಮಲಾ ಹ್ಯಾರಿಸ್ ನೇರವಾಗಿಯೇ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೋ ಬೈಡನ್ ಒಬ್ಬರು ಜನಾಂಗೀಯವಾದಿ ಎಂದು ಹೇಳಿದ್ದರು. ಇದು ಜಿಲ್ ಬೈಡನ್ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲ ಜನಾಂಗೀಯ ದ್ವೇಷ ಅಮೆರಿಕದಲ್ಲಿ ಇನ್ನೂ ಇದೆ ಎಂಬುದಕ್ಕೆ ಈ ಪುಸ್ತಕ ಸ್ಪಷ್ಟ ಸಾಕ್ಷಿಯಾಗಿದೆ.
ಇದನ್ನು ಓದಿ ;- SUPREMECOURT- ಹಿಜಾಬ್ ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ – ಸಿಜೆಐ