ಮಂಡ್ಯ– ಕಾವೇರಿ (kaveri) ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೆ.ಆರ್.ಎಸ್. ಅಣೆಕಟ್ಟೆ ಭರ್ತಿಗೆ ಕ್ಷಣ ಗಣನೆ ಶುರುವಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 122.62 ಅಡಿಗಳು. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು. ಇಂದಿನ ಒಳಹರಿವಿನ ಪ್ರಮಾಣ 30,216 ಕ್ಯೂಸೆಕ್ ಇದ್ದರೆ. ಇಂದಿನ ಹೊರ ಹರಿವಿನ ಪ್ರಮಾಣ 11,633 ಕ್ಯೂಸೆಕ್. ಜಲಾಶಯದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ ಹಾಗೂ ಇಂದಿನ ಸಂಗ್ರಹ ಟಿಎಂಸಿ – 46.460 ಟಿಎಂಸಿ ಇದೆ. ಇಂದು ಅಣೆಕಟ್ಟೆ ಭರ್ತಿ ಆಗುವ ಸಾಧ್ಯತೆ ಇದೆ.
ಈ ಹಿನ್ನೆಲೆ ಡ್ಯಾಂನಿಂದ 11,633 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯ ಅಂಚಿಗೆ ಬಂದಿವೆ.
ಹಾವೇರಿ – ಜಿಲ್ಲೆಯಲ್ಲೂ ಕೂಡ ಮಳೆ ಮುಂದುವೆದಿದ್ದು, ಇನ್ನು ತುಂಗಾಭದ್ರ (thungabhadra) ಜಲಾಶಯದ ನೀರಿನ ಗರಿಷ್ಠ ಮಟ್ಟ- 1633 ಅಡಿಗಳು ಇದ್ದು. ಇಂದಿನ ಮಟ್ಟ- 1626.22 ಅಡಿಗಳು ಆಗಿದೆ. ಒಳಹರಿವು- 85722 ಕ್ಯೂಸೆಕ್ ಇದ್ದರೆ. ಹೊರಹರಿವು- 221 ಕ್ಯೂಸೆಕ್ . ಸಂಗ್ರಹ ಸಾಮರ್ಥ್ಯ- 105.788 ಟಿಎಂಸಿ ಹಾಗೂ ಸದ್ಯದ ಸಂಗ್ರಹ- 80.549 ಟಿಎಂಸಿ ಇದೆ. ಇದನ್ನೂ ಓದಿ : – ತುಂಗಾಭದ್ರ ಗ್ರಾಮದಲ್ಲಿ ಜಿಟಿಜಿಟಿ ಮಳೆಗೆ ಮನೆ ಕುಸಿತ, ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲೂ ಮಳೆ ಮುಂದುವರೆದ ಹಿನ್ನೆಲೆ ನಯಾನಗರಿ ಖ್ಯಾತಿಯ ಜಲಪಾತದ ಸೊಬಗು ನೋಡುಗರ ಸೆಳೆಯುವತ್ತಿದೆ. ಗೋಕಾಕ (gokaka) ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ ಜಲಧಾರೆ.
ವಿಜಯಪುರ – ವಿಜಯಪುರ(vijayapura) ದಲ್ಲೂ ಮಳೆ ಮುಂದುವರೆದಿದ್ದು, ಜಿಲ್ಲೆಯ ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ: 519.60 ಮೀಟರ್. ಇಂದಿನ ಮಟ್ಟ: 516.37 ಮೀಟರ್ . ಒಳಹರಿವು 78149 ಕ್ಯೂಸೆಕ್ ಇದ್ದು, ಹೊರಹರಿವು 451 ಕ್ಯೂಸೆಕ್ ಇದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 123.08 ಟಿಎಂಸಿ ಇದ್ದು, ಇಂದಿನ ನೀರಿನ ಸಂಗ್ರಹ 77.032 ಟಿಎಂಸಿ ಇದೆ.
ಬಾಗಲಕೋಟೆ – ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಸುರಿಯುತ್ತಿರುವ ದಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯಯುಳ್ಳ ಬ್ಯಾರೇಜ್ ಇದಾಗಿದೆ. 73, 000 ಕ್ಯೂಸೆಕ್ಸ ನೀರಿನ ಒಳ ಹರಿವು. ಇಂದಿನ ನೀರಿನ ಸಂಗ್ರಹ 2.42 ಟಿ ಎಂಸಿ. 2 ಲಕ್ಷ ಕ್ಯೂಸೆಕ್ಸ ನೀರು ಹರಿದು ಬಂದ್ರೆ ವಿವಿಧ ಹಳಿಗಳು ಜಲಾವೃತ್ತವಾಗುವ ಸಾದ್ಯತೆ ಇದೆ.
ಇದನ್ನೂ ಓದಿ : – ಅಮರನಾಥ ಪ್ರವಾಹಕ್ಕೆ ಅತಿಯಾದ ಮಳೆ ಕಾರಣ ಮೇಘಸ್ಫೋಟವಲ್ಲ – ಐಎಂಡಿ