ಕಾಂಗ್ರೆಸ್ (Congress) ಪಕ್ಷಕ್ಕೆ ಬರುವಂತೆ ಸಚಿವ ಶ್ರೀರಾಮುಲು (Sriramulu) ಗೆ ಓಪನ್ ಆಗಿ ಬಳ್ಳಾರಿ (Ballari) ಗ್ರಾಮೀಣ ಶಾಸಕ ಬಿ. ನಾಗೇಂದ್ರ (B.Nagendra) ಆಹ್ವಾನ ನೀಡಿದ್ದಾರೆ. ಎಸ್ಟಿಗೆ 7.5 ಮೀಸಲಾತಿ ಕೊಡಿಸುವುದಾಗಿ ಮಾತು ಕೊಟ್ಟು ಇಕ್ಕಟ್ಟಿಗೆ ಸಿಲುಕಿರುವ ರಾಮುಲುಗೆ ಆಫರ್ ನೀಡಿದ್ದಾರೆ.
ಸರ್ಕಾರದಲ್ಲಿ ಶ್ರೀರಾಮುಲು ಅಸಹಾಯಕತೆ ನೋಡಿ ರಾಮುಲುಗೆ ಕಾಂಗ್ರೆಸ್ ಆಫರ್ ನೀಡಿದೆ. ಮೀಸಲಾತಿ ವಿಚಾರದಲ್ಲಿ ST ಸಮುದಾಯಕ್ಕೆ ಬಿಜೆಪಿ ಮೋಸ ಮಾಡಿದೆ. ಶ್ರೀರಾಮುಲುಗೆ ಸಿಹಿ ಸುದ್ದಿ ಕೊಡ್ತೇನೆ ಎಂದು ಎಲ್ಲರಿಗೂ ಸುಳ್ಳು ಹೇಳ್ತಾರೆ. ಅವರ ಸಿಹಿ ಸುದ್ದಿಯಿಂದ ಎಲ್ಲರಿಗೂ ಶುಗರ್ ಬಂದಿದೆ. ಮೀಸಲಾತಿ ಕೊಡಿಸಲು ಶ್ರೀರಾಮುಲುಗೆ ಶಕ್ತಿ ಇಲ್ಲ, ಅವರಿಗೆ ಸಿಎಂ ಸಪೋರ್ಟ್ ಮಾಡ್ತಿಲ್ಲ. ಶ್ರೀರಾಮುಲು ನಾಮಕಾವಸ್ತೆಗೆ ಮಂತ್ರಿಯಾಗಿದ್ದಾರೆ ಅಷ್ಟೇ. ಶ್ರೀರಾಮುಲು ಅಷ್ಟೊಂದು ಪ್ರಭಾವಿಯಾಗಿದ್ದರೆ ಈಗಾಗಲೇ ಎಸ್ಟಿಗೆ ಮೀಸಲಾತಿ ಕೊಡಿಸಬಹುದಿತ್ತು ಎಂದು ಹೇಳಿದ್ದಾರೆ. ಅವರು 7.5 ಮೀಸಲಾತಿ ಕೊಟ್ಟಿದ್ದರೆ ನಾವು ಅವರಿಗೆ ಶಕ್ತಿ ಇದೆ ಅಂತಾ ಒಪ್ಪುತ್ತಿದ್ದೆವು. ಅವರಿಗೆ ಶಕ್ತಿ ಇಲ್ಲ ಹೀಗಾಗಿ ಬಿಜೆಪಿಯನ್ನೇ ಬಿಟ್ಟು ಬಿಡಬೇಕು. ಅವರಿಗೆ ಮೀಸಲಾತಿ ಅಲ್ಲಿ ಕೊಡಿಸೋಕೆ ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಗೆ ಬರಲಿ. ಇದನ್ನು ಓದಿ :- ಉಮೇಶ್ ಕತ್ತಿ ಸ್ಥಾನ ತುಂಬುವಂತಹ ಸಮರ್ಥ ನಾಯಕರು ಜಿಲ್ಲೆಯಲ್ಲಿ ಇದ್ದಾರೆ – ಅಭಯ್ ಪಾಟೀಲ್
ಅವರು ನಮ್ಮ ಪಕ್ಷದ ಸಿದ್ದಾಂತಗಳನ್ನ ಒಪ್ಪಿ ಬಂದ್ರೆ ಓಕೆ ಎಂದು ನಾಗೇಂದ್ರ ಹೇಳಿದ್ದಾರೆ. ಈ ಬಾರಿ ಸರ್ಕಾರದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿಯನ್ನ ನಾವು ವಿರೋಧಿಸುತ್ತೇವೆ. ಜಿಲ್ಲಾಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ :- ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದ ಉದ್ಯಮಿ ಮೋಹನ್ ದಾಸ್ ಪೈ