ನಾಡ ಪ್ರಸಿದ್ಧಿ ಕೊಬ್ಬರಿ ಹೋರಿ (KOBBARI HORRI) ಸ್ಪರ್ಧೆಯಲ್ಲಿ ಹೆಸರು ಮಾಡಿ ಬೆಳ್ಳಿ, ಬಂಗಾರ ಪದಕ ಬಹುಮಾನವಾಗಿ ಗೆದ್ದು ತಂದುಕೊಟ್ಟಿದ್ದ `ಮೈಸೂರು ಹುಲಿ-193′(MYSURU HULI ) ಖ್ಯಾತಿಯ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಹಾವೇರಿ (HAVERI) ಜಿಲ್ಲೆ ರಾಣೇಬೆನ್ನೂರು ನಗರದ ಕುರುಬಗೇರಿ ಓಣಿಯಲ್ಲಿ ಕೊಬ್ಬರಿ ಹೋರಿ ಸಾವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಾಲೀಕರು ಹೋರಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಹೋರಿ ರೈತ ನಾಗಪ್ಪ ಗೂಳಣ್ಣನವರ್ ಎಂಬವರಿಗೆ ಸೇರಿದೆ. ಇದನ್ನು ಓದಿ :- ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ – ಸಿಎಂ ಬೊಮ್ಮಾಯಿ
13 ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸೊಲಿಲ್ಲದ ಸರದಾರನಾಗಿದ್ದ `ಮೈಸೂರು ಹುಲಿ 193′ ಕೊಬ್ಬರಿ ಹೋರಿಯ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ಹಲವಾರು ಬಹುಮಾನಗಳನ್ನು ಗೆದ್ದುಕೊಟ್ಟಿತ್ತು. ಅಲ್ಲದೇ `ಪೀಪಿ ಹೋರಿ’ ಎಂದೂ ಹೆಸರು ಮಾಡಿತ್ತು. ಇಂದು ಮಧ್ಯಾಹ್ನ 1:30ರ ವೇಳೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಹಿಂದೂ ವಿಧಿವಿಧಾನಗಳ ಮೂಲಕ ಕೊಬ್ಬರಿ ಹೋರಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನು ಓದಿ :- ಸತತ 13ವರ್ಷಗಳ ನಂತರ ಇಂದು ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ