ಕೆಪಿಸಿಸಿ ಅಧ್ಯಕ್ಷರು ಬೇಲ್ ನಲ್ಲಿ ಓಡಾಡುತ್ತಿದ್ದಾರೆ .. ಬೇಲ್ ಪಾರ್ಟಿ ಬಗ್ಗೆ ಏನು ಹೇಳ್ತೀರಾ..? – ಅಶ್ವಥ್ ನಾರಾಯಣ್

ಬಿಜೆಪಿಯವರು ಅಗ್ರೆಸ್ಸಿವ್ ಆಗಿ ಮಾತನಾಡ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ(BJP)ಯವರು ಅಗ್ರೆಸ್ಸಿವ್ ಆಗಿ ಮಾತನಾಡ್ತಿಲ್ಲ ಎಂಬ ಸಚಿವ ಮಾಧುಸ್ವಾಮಿ(MADHU SWAMY) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಚಿವ ಅಶ್ವಥ್ ನಾರಾಯಣ್ (ASHWATH NARAYAN)ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕಿಂತ ಅಗ್ರೆಸ್ಸಿವ್ ಇನ್ನೇನು ಹೇಳಬೇಕು? ಎಂದು ಸಚಿವ ಮಾಧುಸ್ವಾಮಿಗೆ ಸಚಿವರು ಪ್ರಶ್ನಿಸಿದ್ರು. ಇದೇ ವೇಳೆ ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ. ಡಿ.ಕೆ ಶಿವಕುಮಾರ್ ಅಂದ್ರೆ ಸರ್ವಿಸ್ ಅಗೇನೆಸ್ಟ್ ಪೇಮೆಂಟ್.

ಮೆನು ಕಾರ್ಡ್ ಹಿಡಿದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಓಡಾಡುತ್ತಾರೆ. ಲೋಕಾಯುಕ್ತ ಹಿಂದೆ ಪಡೆದ ಮಹಾನ್ ವ್ಯಕ್ತಿ ಸಿದ್ದರಾಮಯ್ಯ. ತಾವು ಸಿಎಂ ಆಗಿದ್ದಾಗ ತಮ್ಮನ್ನು ತಾವು ರಕ್ಷಣೆ ಮಾಡಲು ಅವರು ಮಾಡಿದ ತಪ್ಪಿನಿಂದ ಭ್ರಷ್ಟಾಚಾರ ರಕ್ಷಣೆ ಮಾಡಬೇಕು ಅಂತಾ ಲೋಕಾಯುಕ್ತ ಅಧಿಕಾರ ಹಿಂದೆ ಪಡೆದಿದ್ದಾರೆ. ಇಂತಹ ಘನಕಾರ್ಯ ಮಾಡಿದ್ದೀಯಾ ಮಹಾನುಭಾವ ಅಂತಾ ಕೋರ್ಟ್ನಿಂದ ಛೀಮಾರಿ ಹಾಕಿದ್ದಾರೆ. ಈ ಭ್ರಷ್ಟಾಚಾರ ಪಕ್ಷಕ್ಕೆ ಏನ್ ಹೇಳ್ತೀರಾ..? ಸೆಂಟ್ರಲ್ ನಲ್ಲಿ ಕಾಂಗ್ರೆಸ್ ಮಾಲೀಕರು ಬೇಲ್ ನಲ್ಲಿ ಓಡಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬೇಲ್ ನಲ್ಲಿ ಓಡಾಡುತ್ತಿದ್ದಾರೆ. ಈ ಬೇಲ್ ಪಾರ್ಟಿ ಬಗ್ಗೆ ಏನು ಹೇಳುತ್ತೀರಾ..? ಇದನ್ನು ಓದಿ :- ಒಂದು ಪೈಸೆ ಲಂಚ ತೆಗೆದುಕೊಂಡಿದ್ದರೆ ರಾಜಕೀಯ ನಿವೃತ್ತಿ ಪಡೆದು ಸನ್ಯಾಸತ್ವ ಸ್ವೀಕರಿಸುವೆ- ಸಿದ್ಧರಾಮಯ್ಯ ಸವಾಲು

ಕಾಂಗ್ರೆಸ್ (CONGRESS) ನವರಿಗೆ ಪ್ರೊಟೆಸ್ಟ್ ಮಾಡಲು ಅಧಿಕಾರ ಇಲ್ಲ. ಹೋಗಬೇಕು ಫ್ರೀಡಂ ಪಾರ್ಕ್ನಲ್ಲಿ ಕುಳಿತುಕೊಳ್ಳಬೇಕು. ನಾಟಕ ಮಾಡಲು ಬಂದಿದ್ದಾರೆ. ನಾಟಕ ಕಂಪನಿ ಅಂದ್ರೆ ಕಾಂಗ್ರೆಸ್. ಬಸ್ ನಲ್ಲಿ ಎಷ್ಟು ಜನ ಓಡಾಡುತ್ತಿದ್ದಾರಲ್ಲ ಅಷ್ಟೇ ಸೀಟ್ ಬರುತ್ತವೆ. ಏನು ಹೊಡೆದಾಡಿದರೂ ಬಸ್ ನಲ್ಲೇ ಹೊಡೆದಾಡಿಕೊಳ್ಳಲಿ ಅಂತಾ ಮಾಡಿದ್ದಾರೆ. ಬಸ್ ನಲ್ಲಿ 50 ಒಳಗೆ ಸೀಟ್ ಇರಬೇಕು, ಅಷ್ಟೇ ಸೀಟ್ ಬರಬಹುದು ಎಂದು ವ್ಯಂಗ್ಯವಾಡಿದ್ರು. ಇದೇ ವೇಳೆ ಸಿಎಂಗೆ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರಕ್ಕೆ ಸದನದಲ್ಲಿಯೇ ಮಾತನಾಡಲ್ಲ, ಇನ್ನು ಬಹಿರಂಗ ಚರ್ಚೆ ಏನು?. ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆದ ಸದನದಲ್ಲಿ ಏನೂ ವಿಷಯ ಪ್ರಸ್ತಾವನೆ ಮಾಡಲಿಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಪುರೋಸೊತ್ತಾಗಿ ಕುಳಿತಿದ್ದಾರೆ ಎಂದು ಹೇಳಿದ್ರು.

ಇದನ್ನು ಓದಿ :- ಬಿಜೆಪಿಯಲ್ಲಿ ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರಕಾರ ಮಾಡ್ತೀವಿ – ರಮೇಶ್ ಜಾರಕಿಹೊಳಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!