ಕುಮಾರಸ್ವಾಮಿ (KUMARASWAMY)ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P YOGISHWAR )ಪ್ರತಿಕ್ರಿಯೆ ನೀಡಿದ್ದಾರೆ. ಅದು ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಕೇಳಿ. ಕುಮಾರಸ್ವಾಮಿಯವರದ್ದು ಸ್ವಂತ ಪಕ್ಷ. 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು.
ನಮ್ಮದು ರಾಷ್ಟ್ರೀಯ ಪಕ್ಷ ಎಲ್ಲಿ ಹೇಳ್ತಾರೋ ಅಲ್ಲಿ ಸ್ಪರ್ಧೆ ಮಾಡಬೇಕು . ಪಕ್ಷಕ್ಕೆ ಎಲ್ಲೆಲ್ಲಿ ತೊಂದರೆ ಆಗುತ್ತೋ ಅಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು. ಬಹಳ ಸಲ ಈ ರೀತಿ ಅವರೇ ಹೇಳಿದ್ದರು. ಕುಮಾರಸ್ವಾಮಿ ಕೊಕ್ಕರೆ ಇದ್ದಂತೆ ಎಲ್ಲೆಲ್ಲಿ ಮೀನಿರುತ್ತೆ ಅಲ್ಲಲ್ಲಿ ಹೋಗ್ತಿರುತ್ತಾರೆ. ನನ್ನ ಕರ್ಮಭೂಮಿ ಚನ್ನಪಟ್ಟಣ, ರಾಜಕೀಯವಾಗಿ ಜನ್ಮ ನೀಡಿದ್ದು ಚನ್ನಪಟ್ಟಣ. ನಾನು ಮುಂದೆ ಸಹ ಇಲ್ಲೇ ಸೇವೆ ಮಾಡ್ತೇನೆ. ಸುಮಲತಾರವರು ಆದಷ್ಟು ಬೇಗ ಪಕ್ಷ ಸೇರಬಹುದು. ನಾನು ಇತ್ತೀಚೆಗೆ ಅವರನ್ನ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ರು. ಇದನ್ನು ಓದಿ :- ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿರುವುದು ವಿಷಾದನೀಯ – ಸಿದ್ದರಾಮಯ್ಯ
ಆರ್.ಅಶೋಕ್ ಗೆ ಉಸ್ತುವಾರಿ ನೀಡಿದ ವಿಚಾರ
ಅಶೋಕ್ (R.ASHOK)ನಮ್ಮ ಪಕ್ಷದ ಹಿರಿಯ ನಾಯಕರು. ಅಲ್ಲಿ 3 – 4 ಸ್ಥಾನ ಗೆಲ್ಲಬೇಕಿದೆ. ಹಾಗಾಗಿ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ನಾನು ಸಹ ಅವರ ಜೊತೆ ಸೇರಿ ಕೆಲಸ ಮಾಡ್ತೇವೆ. ಗೋಪಾಲಯ್ಯ ನವರಿಗೆ 2 ಕಡೆ ಉಸ್ತುವಾರಿ ಇತ್ತು. ಹಾಗಾಗಿ ಅಶೋಕ್ ಗೆ ಉಸ್ತುವಾರಿ ನೀಡಿದ್ದಾರೆ ಎಂದು ತಿಳಿಸಿದ್ರು. ಗೋ ಬ್ಯಾಕ್ ಅಶೋಕ್ ಎಂಬ ಪೋಸ್ಟರ್ ವಿಚಾರವಾಗಿ ಮಾತನಾಡಿದ ಅವರು, ಸಣ್ಣಪುಟ್ಟ ವಿರೋಧ ಇರಬಹುದು, ಪೋಸ್ಟರ್ ಅದೆಲ್ಲ ತಪ್ಪಾಗುತ್ತದೆ ಎಂದು ಹೇಳಿದ್ರು.
ರಾಮನಗರ (RAMANAGARA) ಜಿಲ್ಲೆ ಚನ್ನಪಟ್ಟಣದಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಬಮೂಲ್ ಉತ್ಸವ ತಡೆಯುವುದಕ್ಕೆ ನಾವು ಪತ್ರ ಬರೆದಿಲ್ಲ. ಬಮೂಲ್ ಟ್ರಸ್ಟ್ ನಲ್ಲಿರುವ ಹಣ ದುರುಪಯೋಗ ಆಗ್ತಿದೆ ಆಗಾಗಿ ನಾನು ಸಹಕಾರ ಸಚಿವರ ಗಮನಸೆಳೆಯುತ್ತೇನೆ. ಬಮೂಲ್ ಉತ್ಸವ ಅಂದರೆ ರೈತರ ಮಕ್ಕಳ ಕ್ಷೇಮಾಭಿವೃದ್ಧಿಗೆ ಬಳಸಬೇಕು. ಆದರೆ ಇಲ್ಲಿ ಆ ಕೆಲಸವಾಗುತ್ತಿಲ್ಲ. ಜಯಮುತ್ತುದು ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿ ಆಗ್ತಿದೆ. ನನ್ನ ಮೇಲೂ ಮೊಟ್ಟೆ, ಕಲ್ಲು ಹೊಡೆಸಿದರು. ಇದಕ್ಕೆ ಅವರೇ ಪ್ರೇರಣೆ ಎಂದು ಹೇಳಿದ್ರು.
ಇದನ್ನು ಓದಿ :- ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥ – ಆಸ್ಪತ್ರೆಗೆ ದಾಖಲು