ಕುಮಾರಸ್ವಾಮಿ ( H.D KUMARASWAMY ) ಪಾರ್ಟಿ ಎಂದರೆ ಅದು ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ ಮತ್ತು ಬೈದಿ ಫ್ಯಾಮಿಲಿ ತರ. ಒಂದು ರಸ್ತೆಗೆ ಹೆಚ್.ಡಿ ದೇವೇಗೌಡರ ಹೆಸರಿಡಬೇಕೆಂಬ ಮನವಿ ಬಂದಿದೆ ಈ ಬಗ್ಗೆ ಯೋಚಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡ ( DHARAWAD ) ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ರಸ್ತೆಗೆ ದೇವೇಗೌಡರ ಹೆಸರಿಡಬೇಕು ಎಂದು ಯಾರೋ ಹೇಳಿದ್ದಾರೆ. ಅದಕ್ಕೆ ಕಾಮೆಂಟ್ ಕೂಡ ಬಂದಿದೆ ಸರ್ವಿಸ್ ರಸ್ತೆಗೆ ಕುಮಾರಸ್ವಾಮಿ, ರೇವಣ್ಣ ಹೆಸರಿಡಬೇಕು, ಸೇತುವೆಗೆ ಪ್ರಜ್ವಲ್ ರೇವಣ್ಣ ಹೆಸರು, ಅಂಡರ್ ಪಾಸ್ ಗೆ ನಿಖಿಲ್ ಹೆಸರು, ಫ್ಲೈಓವರ್ಗೆ ಅನಿತಾ ಕುಮಾರಸ್ವಾಮಿ ಎಂದು ಹೆಸರಿಡಿ ಎಂದು ಕಾಮೆಂಟ್ ಬಂದಿವೆ. ಇವರ ಪಕ್ಷಕ್ಕೆ ಜನ ಯಾವ ರೀತಿ ಕಾಮೆಂಟ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಿ ಎಂದು ಜೋಶಿ ಲೇವಡಿ ಮಾಡಿದ್ದಾರೆ.
ಪಂಚಮಸಾಲಿ (PANCHAMASALI)ಗೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೀಸಲಾತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ಸಿಎಂ ದೃಢ ಹೆಜ್ಜೆಯನ್ನಿಡುತ್ತಿದ್ದಾರೆ. ಈ ಸಂಬಂಧ ಸಿಎಂ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿದ್ದಾರೆ. ಮೀಸಲಾತಿಗೆ ಬೇಡಿಕೆ ಬಂದಿರುವ ಬಗ್ಗೆ ಎಲ್ಲ ವಿಸ್ತೃತ ವರದಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಅವರು ಮುಂದುವರಿಯುತ್ತಾರೆ. ಸಿಎಂ ಮೇಲೆ ವಿಶ್ವಾಸ ಇಟ್ಟು ಮುಂದುವರಿಯಬೇಕು ಎಂದು ಜೋಶಿ ಮನವಿ ಮಾಡಿದರು. ಇದನ್ನು ಓದಿ :- ನನಗೆ ಟಗರು, ಹೌದು ಹುಲಿಯಾ ಅನ್ನೋದು ಅವಮಾನನಾ..? – ಸಿದ್ದರಾಮಯ್ಯ ಪ್ರಶ್ನೆ
ಸ್ಯಾಂಟ್ರೋ ರವಿ (SANTRO RAVI )ಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸ್ಯಾಂಟ್ರೋ ರವಿ ಯಾರು, ಏನು ಎಂಬುದನ್ನು ಈಗಾಗಲೇ ಸಿಎಂ ಹೇಳಿದ್ದಾರೆ. ಅವರ ಜೊತೆ ಯಾರ ಸಂಪರ್ಕ ಇದೆ ಎಂಬುದನ್ನೂ ಅವರು ಹೇಳಿದ್ದಾರೆ. ಯಾವುದೇ ಆಧಾರ ಇಲ್ಲದೆ ಈ ರೀತಿ ಒಬ್ಬರಿಗೆ ನಾಯಿ ಮರಿ ಎನ್ನುವುದು, ಒಬ್ಬರು ಸ್ಯಾಂಟ್ರೋ ರವಿ ಎಂದು ಮಾತನಾಡುವುದು ಸರಿಯಲ್ಲ. ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಚಿಲ್ಲರೆ ಹಂತಕ್ಕೆ ಇಳಿಯಬಾರದು ಎಂದು ತಿಳಿಸಿದರು.
ಇದನ್ನು ಓದಿ :- ಯೋಗೇಶ್ವರ್ ಗೆ ನಾನು ಬಿಜೆಪಿಗೆ ಬರಬೇಕೆಂಬ ಆಸೆ ಇದೆ – ಸುಮಲತಾ ಅಂಬರೀಶ್