ಬಾದಾಮಿ, ಚಾಮುಂಡಿ ಬಿಟ್ಟು ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿದ್ದ್ಯಾಕೆ..? ಈಶ್ವರಪ್ಪ ಪ್ರಶ್ನೆ

ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMAIAH) ಅವರಿಗೆ ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕಿತ್ತು

ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMAIAH) ಅವರಿಗೆ ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕಿತ್ತು. ಬಾದಾಮಿ, ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗಿದ್ದ್ಯಾಕೆ..? ಬಾದಾಮಿಗೆ ಮೋಸ ಮಾಡಿದ್ದೇಕೆ? ಅಂತ ಸಿದ್ದರಾಮಯ್ಯ ಹೇಳಬೇಕು. ಇದು ಬಾದಾಮಿ ಮತದಾರರಿಗೆ ಸಿದ್ದರಾಮಯ್ಯ ಮಾಡ್ತಾ ಇರೋ ದ್ರೋಹ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ (K.S ESHWARAPPA) ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Vijay Sethupathi in Siddaramaiah biopic before Karnataka polls? | Deccan Herald

ಬಾಗಲಕೋಟೆ(BAGALKOTE) ಯಲ್ಲಿ ಮಾತನಾಡಿದ ಅವರು, ನಾನು ಈ ಮೊದಲು ಬಾಗಲಕೋಟೆಯಲ್ಲೆ ಹೇಳಿದ್ದೆ. ಸಿದ್ದರಾಮಯ್ಯ ಯಾವ ಕಾರಣಕ್ಕೂ ಮತ್ತೆ ಬಾದಾಮಿಗೆ ಬರಲ್ಲ ಅಂತ ಎಂದು ಹೇಳಿದ್ರು. ಯಾವ ಮತದಾರರು ನಿನ್ನ ತಿರಸ್ಕಾರ ಮಾಡಿದ್ದಾರೋ, ಅದೇ ಕ್ಷೇತ್ರಕ್ಕೆ ಹೋಗಿ ಜನರಿಗೆ ಅಭಿವೃದ್ದಿ ಕೆಲಸ ಮಾಡುತ್ತೇನೆ ಅಂತ ಹೇಳಿ ಅಲ್ಲೆ ಸ್ಪರ್ಧೆ ಮಾಡುವುನು ನಿಜವಾದ ರಾಜಕಾರಣಿ. ಇದೆಲ್ಲ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಆಸೆ ಆಮೀಷ ತೋರಿಸಿ ಜಾತಿ ಹೆಸರಿನಲ್ಲಿ ಗೆಲ್ಲೋದು, 224 ಕ್ಷೇತ್ರ ಓಡಾಡೋದು ರಾಜಕಾರಣನಾ? ಈಗ ಯಾಕೆ ಬಾದಾಮಿ, ಚಾಮುಂಡಿಯಲ್ಲಿ ನಿಲ್ಲಲ್ಲ ಅಂತ ಹೇಳಿ ಎಂದು ಒತ್ತಾಯಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದು ಬಿಜೆಪಿ ಯೋಚನೆ ಮಾಡುತ್ತಿದೆ. ಇದೇ ಕಾರಣಕ್ಕೆ ನಮ್ಮಲ್ಲಿ ಇನ್ನು ಪಟ್ಟಿ ಬಿಡುಗಡೆ ಮಾಡಿಲ್ಲ. ಜೆಡಿಎಸ್ ನಲ್ಲಿ ತಮ್ಮ ತಮ್ಮ ಹೆಸರು ಘೋಷಣೆ ಮಾಡುತ್ತಿದ್ದಾರೆ. ನನ್ನ ಅಪೇಕ್ಷೆ ಸಿದ್ದರಾಮಯ್ಯ ಅವರು ಚಾಮುಂಡಿಯಲ್ಲಿ ನಿಲ್ಲೋದು ಗೌರವ. ಬಾದಾಮಿ ಬಿಟ್ಟು ಹೋಗುತ್ತಿರುವುದು ಮತದಾರರಿಗೆ ಮಾಡುತ್ತಿರುವುದು ದ್ರೋಹ. ಇದೇ ತರಹ ಮಾಡಿದರೇ 10 ಕ್ಷೇತ್ರದಲ್ಲಿ ನಿಂತರೂ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.  ಇದನ್ನು ಓದಿ :-  ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೇವೇಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

ಅಮಿತ್ ಶಾ, ( AMITH SHASH) ಮೋದಿ ಟೀಕೆ ಮಾಡಿದ್ರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನವರಿದ್ದಾರೆ. ರಾಜ್ಯಕ್ಕೆ ಕರೆತರಲು ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರು ಯಾರಿದ್ದಾರೆ..? ರಾಹುಲ್, ಪ್ರಿಯಾಂಕಾ ಗಾಂಧಿ ಬಂದ್ರೆ ಗೆಲ್ಲೋ ಸೀಟು ಗೆಲ್ಲಲ್ಲ. ಯುಪಿ, ಗುಜರಾತ್ ನಲ್ಲಿ ಎಲ್ಲೆಲ್ಲಿ ಕಾಲಿಟ್ರೋ ಅಲ್ಲೆಲ್ಲ ಡೆಪಾಸಿಟ್ ಕಳೆದುಕೊಂಡ್ರು. ಹಾಗಾಗಿ ಅವರ ರಾಷ್ಟ್ರೀಯ ನಾಯಕರು ಬರಲ್ಲ. ಅವರ ಮುಖ ನೋಡಿ ಜನ ವೋಟ್ ಕೊಡಲ್ಲ. ವಿಪಕ್ಷ ನಾಯಕ ಎಂಬ ಕಲ್ಪನೆ ಇಲ್ದೇನೆ ಬಾಯಿಗೆ ಬಂದಂಗೆ ಏನೇನು ಪದಗಳನ್ನು ಬಳಸ್ತಿದ್ದಾರೆ. ಅವರ ಭಾಷಣ ತೆಗೆದು ಅವರೇ ನೋಡಲಿ. ಸಿದ್ದರಾಮಯ್ಯ, ಡಿಕೆಶಿ ಬಳಸಿದ ಪದಗಳನ್ನು ರಿಪೀಟ್ ಮಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ನಾನು ತಯಾರಿಲ್ಲ. ಆ ರೀತಿ ಅಶ್ಲೀಲ ಪದ ಬಳಕೆ ಮಾಡೋದ್ರಿಂದ ಒಂದಿಷ್ಟು ಜನ ಕೇಕೆ ಹೊಡಿಯಬಹುದು. ಆದ್ರೆ ಸಾಮಾನ್ಯ ಜನರು ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಯನ್ನ ಒಪ್ಪಲ್ಲ. ಮುಂಬರುವ ದಿನಗಳಲ್ಲಿ ವಿಪಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರು ಕಳೆದುಕೊಳ್ತಾರೆ. ನಮಗೂ ಆ ರೀತಿ ಪದಗಳನ್ನು ಬಳಸಲು ನಮಗೂ ಬರುತ್ತೆ. ಆದ್ರೆ ನಾನು ಖಂಡಿತ ಆ ಪದಗಳನ್ನು ಬಳಸಲು ಇಷ್ಟಪಡಲ್ಲ. ನಿಮ್ಮ ಸರ್ಕಾರ ಇದ್ದಾಗ ಏನೇನು ಮಾಡಿದ್ರಿ ಹೇಳ್ರಿ. ಒಳ್ಳೆಯ ಕೆಲಸ ಮಾಡಿದ್ರೆ ನೀವ್ಯಾಕೆ ಸರ್ಕಾರ ಕಳೆದುಕೊಳ್ತಿದ್ರಿ..?ನೀವು ಮಾಡಿದಂತಹ ಸಾಧನೆ ಸರಿಯಿಲ್ಲ ಅಂತಾನೆ ನಿಮ್ಮನ್ನ ಮನೆಗೆ ಕಳುಹಿಸಿದ್ದು ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.


ಸಮ್ಮಿಶ್ರ ಸರ್ಕಾರ ಬೀಳಿಸಿದ ಬಗ್ಗೆ ಸಿದ್ದರಾಮಯ್ಯ-ಹೆಚ್ ಡಿ ಕುಮಾರಸ್ವಾಮಿ (H.D KUMARASWMAY )ವಾಕ್ಸಮರದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗಲೇ ಗೊತ್ತಿತ್ತು. ಇದು ಬಹಳ ದಿನ ಇರಲ್ಲ ಅಂತ. ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ 2 ದಿಕ್ಕಿನವರೆ. ಅವರು ಕುರುಬರು ಅಂತಾ ಹೊರಟವರು, ಇವರು ಒಕ್ಕಲಿಗರು ಅಂತಾ ಹೊರಟವರು. ಅವರಿಬ್ಬರಲ್ಲಿ ರಾಷ್ಟ್ರೀಯ ಚಿಂತನೆ, ರಾಜ್ಯ ಚಿಂತನೆ, ಸೈದ್ಧಾಂತಿಕ ವಾಗಿ, ಅಭಿವೃದ್ಧಿ ಬಗ್ಗೆ ವಿಚಾರವಿಲ್ಲ. ಖಂಡಿತವಾಗಿ ಇಬ್ಬರೂ ಒಟ್ಟಿಗೆ ಇರಲ್ಲ ಅದು ಕೂಡ ನನಗೆ ಗೊತ್ತಿತ್ತು. ಆದರೂ ಪ್ರಯತ್ನ ನಡೆಸಿ ಒಂದಿಷ್ಟು ದಿನ ಆಟ ಆಡಿದರು ಎಂದು ಲೇವಡಿ ಮಾಡಿದ್ರು.

ಇದನ್ನು ಓದಿ :- ಸಿಎಂ ಬೊಮ್ಮಾಯಿ ಹುಟ್ಟುಹಬ್ಬ ಹಿನ್ನಲೆ – ಶುಭಕೋರಿದ ಅಮಿತ್ ಶಾ, ಯಡಿಯೂರಪ್ಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!