ಹುಬ್ಬಳ್ಳಿ – ಸಿಎಂ ಹುಬ್ಬಳ್ಳಿ ಮನೆಗೆ ಬರುವ ವಿಚಾರ ತಿಳಿದು ಮನೆಗೆ ಉಪಹಾರಕ್ಕೆ ಆಹ್ವಾನಿಸಿದ್ದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಅವರು ಸಿಎಂ ಅವರು ಕುಟುಂಬ ಸಮೇತವಾಗಿ ಬರುವ ಪ್ಲಾನ್ ಇತ್ತು. ಕಳೆದ ರಾತ್ರಿ ಸಿಎಂ ಕರೆ ಮಾಡಿ ಆಹ್ವಾನಿಸಿದ್ದೆ. ಆದ್ರೆ ಅನಿವಾರ್ಯ ಕಾರಣದಿಂದ ಸಿಎಂ ಒಬ್ಬರೇ ಬಂದಿದ್ದಾರೆ. ಮನೆಯಲ್ಲಿ ಕೂತು ಮಾತನಾಡಿದ್ದೇವೆ. ಇದನ್ನೂ ಓದಿ :- ಬೆಲ್ಲದ್ ನಿವಾಸಕ್ಕೆ ಸಿಎಂ- ಕುತೂಹಲಕ್ಕೆ ಕಾರಣವಾಯಿತು ಬೊಮ್ಮಾಯಿ ನಡೆ
ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ, ವ್ಯಾಪಾರದ ಬಗ್ಗೆ ಚರ್ಚೆ ಮಾಡಿದ್ವಿ. ನಾನು ನನ್ನ ಪತ್ನಿ ಎಲ್ಲರೂ ಕೂತು ಔಪಚಾರಿಕ ಮಾತುಕತೆ ಮಾಡಿದ್ವಿ ಅಷ್ಟೇ. ನನ್ನನ್ನು ಮಂತ್ರಿ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ತಿಳಿಸಿದ್ರು.
ಇದನ್ನೂ ಓದಿ :- ಸಿದ್ದರಾಮಯ್ಯ 5 ವರ್ಷ ಇದ್ದಾಗ ಎಷ್ಟು ಮರ್ಡರ್ ಗಳು ಆಯ್ತು ? – ಸಿದ್ದರಾಮಯ್ಯ ವಿರುದ್ದ ಗರಂ ಆದ ಹೆಚ್.ಡಿ.ಕೆ