ರಮೇಶ್ ಕುಮಾರ್ (Ramesh kumar) ಗೈರು ಹಾಜರಾದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (Dk.shivakumar) ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಲೀಡರ್ ಗಳನ್ನ ಕರೆದುಕೊಂಡು ಹೋಗಲು ಆಗಲ್ಲ. ಮೂರು ಜನರ ಮೇಲೆ ಭಾಷಣಕ್ಕೆ ಅವಕಾಶ ಇಲ್ಲ. ರಮೇಶ್ ಕುಮಾರ್ ಅವರು ಕ್ಷೇತ್ರದಲ್ಲಿ ಇದ್ದಾರೆ.
ಅಕ್ಕಪಕ್ಕದ ಕ್ಷೇತ್ರಗಳನ್ನ ನೋಡ್ತಿದ್ದಾರೆ. ಕೃಷ್ಣಬೈರೇಗೌಡ (Krishnabairegowda) ರೂ ಕ್ಷೇತ್ರದಲ್ಲಿ ಇದ್ದಾರೆ. ಎಲ್ಲರೂ ಎಲ್ಲಾ ಕಡೆ ಬರಲು ಆಗಲ್ಲ. ಸಿದ್ದರಾಮಯ್ಯ ಜತೆ ಎಲ್ಲರೂ ಹೋಗಲು ಆಗುತ್ತಾ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ . ನೀವು ಸಹ ಅವರು ಬರಲಿಲ್ಲ ಅಂತ ತಲೆ ಕೆಡಿಸಿಕೊಳ್ಳುವುದು ಬೇಡ. ಬಿಜೆಪಿಯಲ್ಲೂ ಬಹಳ ಗೊಂದಲಗಳಿವೆ . ಅವರು ದೊಡ್ಡ ದೊಡ್ಡ ಲೀಡರ್ಸ್ ಮತ್ತು ಮಿನಿಸ್ಟರ್ ಇದಾರೆ ಎಂದು ಹೇಳಿದ್ರು. ಇದನ್ನೂ ಓದಿ : – ಕೋಲಾರದ ಮಾಲೂರಿಗೆ ಪ್ರಜಾ ಧ್ವನಿ ಯಾತ್ರೆ ಆಗಮನ
ಇದೇ ವೇಳೆ, ಬಿಜೆಪಿ (BJP) ರಥ ಯಾತ್ರೆ ಆದ್ರೂ ಮಾಡಲಿ. ಹೆಲಿಕಾಪ್ಟರ್ ಯಾತ್ರೆ ಆದ್ರು ಮಾಡಲಿ, ಏನು ಆಗಲ್ಲ. ನಾವು ಜನರ ಹೃದಯದಲ್ಲಿ ಇದ್ದೇವೆ. ಇದೇ ವೇಳೆ, ರಮೇಶ್ ಜಾರಕಿಹೊಳಿ ಅಮಿತ್ ಶಾ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡದೆ ತೆರಳಿದ್ರು.
ಇದನ್ನೂ ಓದಿ : – ರಾಜ್ಯದಲ್ಲಿ ಏನೇ ಕೆಲಸ ಮಾಡಿದ್ರು 40 ಪರ್ಸೆಂಟ್ ಹಣ ಕೊಡ್ಲೇಬೇಕು – ಡಿಕೆ. ಶಿವಕುಮಾರ್