ಕೆಪಿಪಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ನಿವಾಸಕ್ಕೆ ಸಚಿವ ಅಶ್ವಥ್ ನಾರಾಯಣ್ ಭೇಟಿ ನೀಡಿರೋದು ತೀವ್ರ ಕುತೂಹಲ ಕೆರಳಿಸಿದೆ. ಅಶ್ವಥ್ ನಾರಾಯಣ್ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸದಾಶಿವನಗರದಲ್ಲಿರುವ ಎಂಬಿಪಿ ನಿವಾಸಕ್ಕೆ ಅಶ್ವತ್ಥ್ ನಾರಾಯಣ್ ಭೇಟಿ ನೀಡಿರೋದು ಹಲವು ಗುಸು ಗುಸುಗಳಿಗೆ ಕಾರಣವಾಗಿದೆ.
ಈ ನಡುವೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಂ ಬಿ ಪಾಟೀಲ್, ಅಶ್ವಥ್ ನಾರಾಯಣ್ ಎಂಬಿ ಪಾಟೀಲ್ ಮನೆಗೆ ಬಂದ ವಿಚಾರ ಕುರಿತಂತೆ ಪ್ರತಿಕ್ರಿಸಿದ್ದಾರೆಯ ನಮ್ಮ ಮನೆಗೆ ಅವರು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅವರ ಮಗಳು, ನಮ್ಮ ಮಗ ಕ್ಲಾಸ್ ಮೇಟ್ಸ್. ಅವರನ್ನ ಭೇಟಿ ಮಾಡಬೇಕು ಅಂದರೆ ನಾನೇ ಹೋಗ್ತಿನಿ. ನನ್ನ ಅವರು ಭೇಟಿ ಮಾಡಿಲ್ಲ. ಭೇಟಿ ಮಾಡಬಾರದು ಅಂತ ಏನೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಕೋಲಾರದಲ್ಲಿ ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಾವಿನ ಬೆಳೆ ಸಂಪೂರ್ಣ ನಾಶ
ಬೊಮ್ಮಾಯಿ ಮನೆಗೆ ಹೋಗಲ್ವಾ ನಾನು ? ಎಂದು ಪ್ರಶ್ನಿಸಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ಅಶ್ವಥ್ ನಾರಾಯಣ್ ಹೆಸರು ಹಾಗೂ ಅವರ ಕುಟುಂಬದವರ ಹೆಸರು ಬಂದಿದೆ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ಪಾರದರ್ಶಕ ತನಿಖೆಯಾಗಬೇಕು ಅಂದರೆ ರಾಜೀನಾಮೆ ಕೊಡಬೇಕು ಎಂದು ಪಾಟೀಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : – ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ದಾಳಿ ಪ್ರಕರಣ – ತಪ್ಪಿತಸ್ಥರ ಸುಮ್ಮನೆ ಬಿಡಲ್ಲ ಎಂದ ಸಿಎಂ ಭಗವಂತ್ ಮಾನ್