ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ಅನ್ನೋದನ್ನು ನೋಡಿಕೊಳ್ಳಲಿ – ಹೆಚ್.ಡಿ.ಕೆ ವಾಗ್ದಾಳಿ

ಮೈಸೂರು ಭಾಗದಲ್ಲಿ ಜೆಡಿಎಸ್ ಒಂದೂ ಸ್ಥಾನ ಗೆಲ್ಲಲ್ಲ ಎಂದಿದ್ದ ಸಿದ್ದರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ಅನ್ನೋದನ್ನು ನೋಡಿಕೊಳ್ಳಲಿ.

BJP govt in K'taka has betrayed SC/STs: Siddaramaiah | Bengaluru -  Hindustan Times

ಮೈಸೂರು ಭಾಗದಲ್ಲಿ ಕಳೆದ ಬಾರಿ ಏನಾಗಿದೆ ಅವರಿಗೆ ಗೊತ್ತಿಲ್ವಾ. ಅವರು ಇನ್ನೂ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ. 5 ವರ್ಷ ಮುಖ್ಯಮಂತ್ರಿ ಆಗಿ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅನ್ನೋದು ತೀರ್ಮಾನ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಬಗ್ಗೆ ಒಂದೂ ಸೀಟು ಗೆಲ್ಲಲ್ಲ ಅನ್ನೋದು ರಾಜಕೀಯವಾಗಿ ಏನೇನೂ ತಿಳಿವಳಿಕೆ ಇಲ್ಲದ ವ್ಯಕ್ತಿ ಹೇಳುವ ಮಾತು. ನಾವುಗಳೆಲ್ಲ ತಂತ್ರಗಾರಿಕೆ ಮಾಡಿ ಸೋಲಿಸುತ್ತೇವೆ ಎಂಬ ಭಯ ಇದ್ದರೆ. ಅವರು ಕೊನೆವರೆಗೂ ಕ್ಷೇತ್ರವನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಚುನಾವಣೆ ಮಾಡಲಿ ಎಂದರು.

karnataka psi recruitment scam: ರಾಜಕಾರಣಿಗಳಿಗೆ ಫೋಟೋ ತಂದಿಟ್ಟ ಫಜೀತಿ : ಸೀಟು  ಹಂಚಿಕೆ ಹಗರಣದಿಂದ ಪಿಎಸ್‌ಐ ಹಗರಣದವರೆಗೆ! - karnataka psi recruitment scam : divya  hagaragi photo viral with dk shivakumar ...

ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ವಿಚಾರ
ಫೋಟೋ ಜೊತೆ ಬಿಜೆಪಿ ಅವರ ಬರಹ ಅವರ ಕೀಳು ಅಭಿರುಚಿ ತೋರಿಸುತ್ತದೆ. ಅವರು ನಿಜಕ್ಕೂ ಹಿಂದೂ ಸಂಸ್ಕೃತಿಯನ್ನು ಉಳಿಸುವವರಾದರೆ. ಕೀಳು ಮಟ್ಟದ ಪದಗಳಾದ ಬಾದಾಮಿ….ಗೋಡಂಬಿ.. ಎಂದು ಹೇಳುತ್ತಿರಲಿಲ್ಲ. ಪಿಎಸ್ ಐ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ಸಸ್ಪೆಂಡ್ ಅಲ್ಲ…ಡಿಸ್ಮಿಸ್ ಮಾಡಬೇಕು ಎಂದು ಕಿಡಿಕಾರಿದ್ರು. ಇದನ್ನೂ ಓದಿ :- ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ – ಸಿದ್ದರಾಮಯ್ಯ


ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ವರ್ಷನೂ ಹನಿಹನಿ ನೀರಿನ ಉಪಯೋಗವನ್ನು ರೈತರಿಗೆ ಮಾಡಿಕೊಡುತ್ತೇವೆ. ತುಮಕೂರಿಗೆ ಹೇಮಾವತಿ ನೀರು ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು. ಆದರೆ ಕೆಲವರು ಅದನ್ನು ಒಪ್ಪುತ್ತಿಲ್ಲ.ನೀರಿನ ವಿಚಾರದಲ್ಲಿ ತುಮಕೂರು ಜನತೆಗೆ ಜೆಡಿಎಸ್ ದ್ರೋಹ ಮಾಡಿಲ್ಲ. ಯಾವ ದೇವರ ಮುಂದೆನೂ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಕೆಲವರು ತುಮಕೂರಿಗೆ ದೇವೇಗೌಡ ಕುಟುಂಬದವರು ನೀರು ಕೊಟ್ಟಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ ಎಂದರು.

ಎತ್ತಿನ ಹೊಳೆ ಯೋಜನೆ ಎಲ್ಲಿಗೆ ಬಂದಿದೆ. ಒಂದು ವರ್ಷ ಅಂದ್ರು 10 ವರ್ಷ ಆದ್ರೂ ಆಗಲಿಲ್ಲ. ದುಡ್ಡಿನ ಹೊಳೆ ಹರಿಸ್ತಾ ಇದ್ದಾರೆ ಅವರೆಲ್ಲಾ. ಸ್ಕೂಲ್ ಫೀಸ್ ಕಟ್ಟಲು ಈಗ ಲಕ್ಷ ಲಕ್ಷ ಬೇಕು. ಆದರೆ ನಮ್ಮ ಸರ್ಕಾರ ಮುಂದೆ ಬಂದರೆ 1-10 ರ ವರೆಗೆ ಉಚಿತ ಶಿಕ್ಷಣ ನೀಡುತ್ತೇವೆ. ಇದಕ್ಕೆ ನೀವು ತೀರ್ಮಾನ ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸೌಲಭ್ಯ ನೋಡುವಂತ ಯೋಜನೆ ನಾವು ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ ಉದ್ಯೋಗ ಹಾಗೂ ನಿವೇಶನ ನೀಡುವ ಯೋಜನೆ ಇದೆ ಎಂದು ತಿಳಿಸಿದ್ರು.

ಇದನ್ನೂ ಓದಿ :- ಒಟಿಟಿಯಲ್ಲಿ ‘ಜೇಮ್ಸ್​’ ಪ್ರಸಾರ – ಏಪ್ರಿಲ್ 14ಕ್ಕಾಗಿ ಕಾದು ಕುಳಿತಿರುವ ಪುನೀತ್​ ಅಭಿಮಾನಿಗಳು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!