ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲಿ. ಮೊದಲೇ ನಾವು ಅಭ್ಯರ್ಥಿ ಹಾಕಿದ್ದೇವೆ. ನಾವು ಅಭ್ಯರ್ಥಿ ಹಾಕಿದ್ಮೇಲೆ ಜೆಡಿಎಸ್ ನವರು ಅಭ್ಯರ್ಥಿ ಹಾಕಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿಯವರನ್ನು ಸಿಎಂ ಮಾಡಿದವರು ನಾವು. ಈಗ ನಮಗೆ ಸಫೋರ್ಟ್ ಮಾಡಿ ಬಿಜೆಪಿಯನ್ನು ಸೋಲಿಸುವುದು ನಿಮ್ಮ ಅಭಿಪ್ರಾಯ. ಉದ್ದೇಶವಿದ್ರೆ ನಮಗೆ ಸಫೋರ್ಟ್ ಮಾಡಿ. ನಾವು ಅಭ್ಯರ್ಥಿ ಹಾಕಿದ್ಮೇಲೆ ಇವರು ಸುಮ್ಮನೆ ಇರಬೇಕಿತ್ತು. ನಾವು ಸಹಕಾರ ತೆಗೆದುಕೊಳ್ಳೋಕೆ ತಯಾರಾಗಿದ್ದೇವೆ. ಅವರ ವೋಟುಗಳನ್ನೆಲ್ಲ ನಮ್ಮ ಅಭ್ಯರ್ಥಿಗೆ ಹಾಕಬೇಕು ಎಂದು ಹೇಳಿದರು. ಇದನ್ನೂ ಓದಿ :- ಬಿ.ಸಿ.ನಾಗೇಶ್ ಮನೆ ಮುಂದೆ ಪ್ರತಿಭಟನೆ ಪ್ರಕರಣ- NSUI ಕಾರ್ಯಕರ್ತರಿಗೆ ಜಾಮೀನು – ನಾಳೆ ಬಿಡುಗಡೆ
ದಲಿತ ನಾಯಕ ಪರಮೇಶ್ವರರನ್ನು ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಲಿ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬಿಜೆಪಿಯವರು ಮೊದ್ಲು ತಮ್ಮ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ. ಅವರು ಇರೋದು ಹೇಳೋದಕ್ಕಾ.? ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ದಲಿತರು ಅಂತಾ ಮಾಡಲಿ, ಯಾಕೆ ಅವರು ಮಾಡೋದಿಲ್ಲ. ಕಾಂಗ್ರೆಸ್ ನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮುಂದುವರೆದವರು ಯಾರು ಬೇಕಾದರೂ ಆಗಬಹುದು. ಬಿಜೆಪಿಯಲ್ಲಿ ಹಾಗಾಗುತ್ತಾ.? ಯಡಿಯೂರಪ್ಪ ನಂತರ ಬಸವರಾಜ್ ಬೊಮ್ಮಾಯಿ ಯಾಕಾಗಬೇಕು.? ಕಾರಜೋಳರನ್ನು ಸಿಎಂ ಮಾಡಬಹುದಿತ್ತಲ್ಲಪ್ಪಾ.? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ :- ಶಿಕ್ಷಣ ಸಚಿವರ ಮನೆ ಮೇಲಿನ ದಾಳಿ ಪ್ರಕರಣ – ಬಂಧಿತರನ್ನ ಭೇಟಿ ಮಾಡಲಿರೋ ಡಿಕೆಶಿ