CHINA ದಲ್ಲಿ COVID ಪ್ರಕರಣಗಳು ಮತ್ತೆ ಉಲ್ಬಣಿಸುತ್ತಿದ್ದು, ಹಲವೆಡೆ ʼಜೀರೋ ಕೋವಿಡ್ ನಿಯಮʼ ಜಾರಿಗೊಳಿಸಿ ನಿರ್ಬಂಧ ವಿಧಿಸಲಾಗಿದೆ. ಅಲ್ಲಿನ ಸರ್ಕಾರದ ವಿರುದ್ಧ ಜನ ವ್ಯಾಪಕ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಮಂದಿ ಸಾವಿಗೀಡಾದ ಘಟನೆಗೆ ಚೀನಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.
上海乌鲁木齐路 民众高喊
共产党 下台!
这是迄今为止最为激进的口号。 pic.twitter.com/ijP7lxnIgH— 李老师不是你老师 (@whyyoutouzhele) November 26, 2022
ದೇಶದಲ್ಲಿ COVID ಹೆಚ್ಚಳದಿಂದಾಗಿ ಆರ್ಥಿಕ ಕೇಂದ್ರ ಶಾಂಘೈ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದೇ ವೇಳೆ ಕ್ಸಿನ್ ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿಯಲ್ಲಿನ ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಜನ ಮೃತಪಟ್ಟಿದ್ದರು. ಕಟ್ಟಡವು ಭಾಗಶಃ ಲಾಕ್ ಡೌನ್ ಆಗಿರುವುದರಿಂದ ನಿವಾಸಿಗಳು ಸಮಯಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಚೀನಾದ ಅತ್ಯಂತ ಜನನಿಬಿಡ ನಗರವಾದ ಶಾಂಘೈ ನಲ್ಲಿ ನಿವಾಸಿಗಳು ಶನಿವಾರ ರಾತ್ರಿ ವುಲುಮುಕಿ ರಸ್ತೆಯಲ್ಲಿ ಜಮಾಯಿಸಿದರು. ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು. ʼಡೌನ್ ಕ್ಸಿ ಜಿನ್ಪಿಂಗ್’ (Down xi jinping) ಎಂದು ಆಕ್ರೋಶ ಹೊರಹಾಕಿದ್ದಾರೆ .
ಇದನ್ನೂ ಓದಿ : – ಉತ್ತರ ಕರ್ನಾಟಕ ಅಭಿವೃದ್ದಿಗೆ ಕೋಟ್ಯಂತರ ಹಣ ನೀಡಿದ್ದೇನೆ – ಕುಮಾರಸ್ವಾಮಿ