ವಿಜಯನಗರ (Vijayanagara) ದ ಹೊಸಪೇಟೆಯ ಹೊರವಲಯದಲ್ಲಿರೋ RTO ಚೆಕ್ ಪೋಸ್ಟ್ ಮೇಲೆ ಬೆಳಗಿನ ಜಾವ ಲೋಕಾಯುಕ್ತ (Lokhayuktha) ಪೊಲೀಸರು ದಾಳಿ ಮಾಡಿದ್ದಾರೆ. DYSP ಅಯ್ಯನಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಯಾರೂ ಇರಲಿಲ್ಲಾ ಎಂಬ ಮಾಹಿತಿ ಲಭ್ಯವಾಗಿದೆ.
ಭಾರಿ ವಾಹನಗಳು ಸೇರಿದಂತೆ ಇತರೆ ವಾಹನ ಚಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು RTO ಚೆಕ್ ಪೋಸ್ಟ್ ನಲ್ಲಿ ದಾಳಿ ಮಾಡಿದ್ದಾರೆ.
ಆನೇಕಲ್ (Anekal) ನ ಅತ್ತಿಬೆಲೆಯ RTO ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಮುಂಜಾನೆ 5 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆರ್ಟಿಓ ಅಧಿಕಾರಿಗಳ ಭ್ರಷ್ಟಾಚಾರ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ದಾಳಿ ವೇಳೆ ಸುಮಾರು 5 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು, ಕೇರಳ , ಮಹಾರಾಷ್ಟ್ರ ಮೂಲದ ಸರಕು ಸಾಗಣೆ ಲಾರಿಗಳ ಬಳಿ ಅಧಿಕಾರಿಗಳು ಹಣ ಪಡೆಯುತ್ತಿದ್ದ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಭ್ರಷ್ಟ ಅಧಿಕಾರಿಗಳ ಮಟ್ಟ ಹಾಕಲು ಲೋಕಾಯುಕ್ತ ಕಾರ್ಯಾಚರಣೆ ನಡೆಸಿದೆ. ಇಬ್ಬರು RTO ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಚೇರಿಯಲ್ಲಿರುವ ಹಲವು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ : – ಬೆಳ್ಳಂಬೆಳಗ್ಗೆ ರಾಜ್ಯದ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ
ಬಳ್ಳಾರಿ (Ballari) ಯ ಆರ್ ಟಿಓ ಅಡಿ ಬರುವ ಆಂಧ್ರದ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಗಡಿಭಾಗದ ಮೂಲಕ ಓಡಾಡುವ ಲಾರಿಗಳಿಂದ ವಸೂಲಿ ಆರೋಪ ಹಿನ್ನೆಲೆ ದಾಳಿ ಮಾಡಿದ್ದಾರೆ. ವಾಹನಗಳಿಗೆ ಸಮಗ್ರ ದಾಖಲೆಗಳು ಇಲ್ಲದೇ ಇದ್ರೇ ಅಧಿಕಾರಿಗಳು 500 ಅಥವಾ ಸಾವಿರ ವಸೂಲಿ ಮಾಡ್ತಿದ್ರು. ದಾಳಿ ಹಿನ್ನೆಲೆ ಆರ್ ಟಿಓ ಅಧಿಕಾರಿಗಳು ಚೆಕ್ ಪೋಸ್ಟ್ ಬಳಿ ದೌಡಾಯಿಸಿದ್ದಾರೆ.
ಇದನ್ನೂ ಓದಿ : – ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಈ ಯಾತ್ರೆ ನಡೆಯುತ್ತೆ – ರಾಹುಲ್ ಗಾಂಧಿ