ವಾಣಿಜ್ಯ ಬಳಕೆಯ LPG ಸಿಲಿಂಡರ್ ದರವನ್ನು 36 ರು. ಇಳಿಕೆ ಮಾಡಲಾಗಿದೆ. ಇದರೊಂದಿಗೆ ವಾಣಿಜ್ಯ ಬಳಕೆಯ 19 ಕೆ.ಜಿ. LPG ಸಿಲಿಂಡರ್ ದರ 2012.50ಕ್ಕೆ ಬದಲಾಗಿ 1,976 ರೂ. ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.
ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜುಲೈ 1ರಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು 198 ರೂ ಕಡಿತ ಮಾಡಿದ್ದವು. ಅದಕ್ಕೂ ಮೊದಲು ಜೂನ್ 1ರಂದು 135 ರು. ದರ ಇಳಿಕೆ ಮಾಡಲಾಗಿತ್ತು.
ಇದನ್ನು ಓದಿ :- ಸಂಜಯ್ ರಾವತ್ ಗೆ ಮತ್ತೊಂದು ಸಂಕಷ್ಟ- ಮಹಿಳಾ ‘ಸಾಕ್ಷಿ’ಯಿಂದ ಶಿವಸೇನೆ ನಾಯಕನ ವಿರುದ್ಧ ಬೆದರಿಕೆ ಆರೋಪ