ದೇಶದ ಹಲವು ರಾಜ್ಯಗಳಲ್ಲಿ ಜಾನುವಾರುಗಳನ್ನು ಲಂಪಿ (Lumpy) ಚರ್ಮರೋಗ ಬಿಟ್ಟು ಬಿಡದೇ ಕಾಡುತ್ತಿದೆ. ಈ ಮಾರಕ ರೋಗದ ಕಾರಣ ಕೇವಲ ರಾಜಸ್ಥಾನ(Rajasthan) ವೊಂದರಲ್ಲೇ 12 ಸಾವಿರ ಮೂಕಜೀವಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ರಾಜಸ್ಥಾನ ಸರ್ಕಾರ, ಜಾನುವಾರು ಸಂತೆಗಳನ್ನು ನಿಷೇಧಿಸಿದೆ.
ರಾಜಸ್ಥಾನದಲ್ಲಿ ಈವರೆಗೂ 2.81 ಲಕ್ಷ ಹಸುಗಳನ್ನು ಲಂಪಿ ರೋಗ ಬಾಧಿಸಿದೆ. ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ 2,511ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಇದನ್ನೂ ಓದಿ : – ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಡ –ಜಮೀರ್ ಬಾಯಿ ಮುಚ್ಚಿಸಿದ ನಾಯಕರು
ನಂತರ ಬಾರ್ಮರ್ ನಲ್ಲಿ 1,619, ಜೋಧ್ ಪುರದಲ್ಲಿ 1,581, ಬಿಕಾನೇರ್ನಲ್ಲಿ 1,156, ಜಾಲೋರ್ನಲ್ಲಿ 1,150 ಮತ್ತು ಜಾಲೋರ್ನಲ್ಲಿ 1,138 ಸಾವುಗಳು ವರದಿಯಾಗಿವೆ ಇನ್ನು, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಅಂಡಮಾನ್ ನಿಕೋಬಾರ್ನಲ್ಲಿ ನೂರಾರು ಸಂಖ್ಯೆಯ ಪಶುಗಳು ಸಾವನ್ನಪ್ಪಿವೆ.
ಇದನ್ನೂ ಓದಿ : – ವಿಧಾನಸೌಧದ 3ನೇ ಮಹಡಿ ಶುದ್ದವಾಗುವವರೆಗೂ ಯಾವುದೇ ತನಿಖಾ ಸಂಸ್ಥೆ ಬಂದ್ರೂ ಭ್ರಷ್ಟಾಚಾರ ನಿರ್ಮೂಲನೆ ಆಗಲ್ಲ – ಹೆಚ್ಡಿಕೆ