ಮಹಾರಾಷ್ಟ್ರ ( MAHARASTRA ) ಮತ್ತು ಕರ್ನಾಟಕ ( KARNATAKA ) ದ ನಡುವಿನ ಗಡಿ ವಿವಾದದಲ್ಲಿ ಕೇಂದ್ರ ಗೃಹ ಸಚಿವಾಲಯ ಮಧ್ಯಪ್ರವೇಶಿಸುವಂತೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ( SUPRIYA SULE ) ಕೋರಿದ್ದಾರೆ. ಶೂನ್ಯ ವೇಳೆಯಲ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಳೆ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಮಹಾರಾಷ್ಟ್ರದ ಜನರು ಪ್ರತಿದಿನ ‘ಹೊಡೆತ’ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ 10 ದಿನಗಳಲ್ಲಿ ಮಹಾರಾಷ್ಟ್ರವನ್ನು ಒಡೆಯಲು ಸಂಚು ರೂಪಿಸಲಾಗುತ್ತಿದೆ. (ಗೃಹ ಸಚಿವ) ಅಮಿತ್ ಶಾ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು. ಕರ್ನಾಟಕದ ಬಿಜೆಪಿ ( BJP ) ಸಂಸದರು ಸುಪ್ರಿಯಾ ಸುಳೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ.
ಈ ವಿಚಾರವು ನ್ಯಾಯಾಲಯದ ಅಧೀನದಲ್ಲಿದೆ ಎಂದು ಹೇಳಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ‘ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಎರಡು ರಾಜ್ಯಗಳ ನಡುವಿನ ವಿಚಾರವಾಗಿದೆ’ ಎಂದರು. ಇದನ್ನು ವಿರೋಧಿಸಿ ಎನ್‌ಸಿಪಿ ಸದಸ್ಯರು ಸದನದಿಂದ ಹೊರನಡೆದರು.
ಇದನ್ನು ಓದಿ : – ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ – ಸಚಿವ ಸುಧಾಕರ್