ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ( THUSHAR GANDHI ) ಇಂದು ಬೆಳಗ್ಗೆ ಮಹಾರಾಷ್ಟ್ರ ( MAHARASTA ) ದ ಬುಲ್ಧಾನ ಜಿಲ್ಲೆಯ ಶೇಗಾಂವ್ ನಲ್ಲಿ ಭಾರತ್ ಜೋಡೋ ( BHARATH JODO ) ಯಾತ್ರೆಯಲ್ಲಿ ರಾಹುಲ್ ಗಾಂಧಿ ( RAHUL GANDHI ) ಜತೆ ಹೆಜ್ಜೆ ಹಾಕಿದ್ದಾರೆ.
ತುಷಾರ್ ಗಾಂಧಿ ಅವರ ಭಾಗವಹಿಸುವಿಕೆಯನ್ನು ಐತಿಹಾಸಿಕ ಎಂದು ಕಾಂಗ್ರೆಸ್ ಶ್ಲಾಘಿಸಿದೆ. ನ. 7 ರಿಂದ ಮಹಾರಾಷ್ಟ್ರದ ಮೂಲಕ ಹಾದುಹೋಗುವ ಯಾತ್ರೆಯು ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಪ್ರಯಾಣವನ್ನು ಪುನರಾರಂಭಿಸಿತು. ಕೆಲವು ಗಂಟೆಗಳ ನಂತರ ಅದು ಶೇಗಾಂವ್ ತಲುಪಿತು. ಇಲ್ಲಿ ಲೇಖಕ ಮತ್ತು ಕಾರ್ಯಕರ್ತ ತುಷಾರ್ ಗಾಂಧಿ ಯಾತ್ರೆಗೆ ಸೇರಿಕೊಂಡರು. ಇದನ್ನೂ ಓದಿ : – 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ರು..? – ಶ್ರೀ ರಾಮುಲು ಪ್ರಶ್ನೆ
ನಾನು ನಾಳೆ ಶೇಗಾಂವ್ ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ತುಷಾರ್ ಗಾಂಧಿ ಗುರುವಾರ ಟ್ವೀಟ್ ಮಾಡಿದ್ದರು. ತುಷಾರ್ ಗಾಂಧಿ ಅವರಲ್ಲದೆ, ಹಿರಿಯ ಕಾಂಗ್ರೆಸ್ ನಾಯಕರಾದ ಮುಕುಲ್ ವಾಸ್ನಿಕ್, ದೀಪೇಂದರ್ ಹೂಡಾ, ಮಿಲಿಂದ್ ದಿಯೋರಾ, ಮಾಣಿಕ್ರಾವ್ ಠಾಕ್ರೆ, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯಿ ಜಗತಾಪ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ : – 130 ಕೋಟಿ ಖರ್ಚು ಮಾಡಿ ಕಾಂತರಾಜು ಅಧ್ಯಕ್ಷತೆಯಲ್ಲಿ ಜಾತಿ ಸಮೀಕ್ಷೆ ಮಾಡಿಸಿದ್ರು – ಕೆ.ಸುಧಾಕರ್