ಏರೋ ಇಂಡಿಯಾ 2023 ಷೋ ಗೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಯಲಹಂಕ (yellanka) ವಲಯದಲ್ಲಿ ಜ.30 ರಿಂದ ಫೆ.20 ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ಪ್ರದರ್ಶನ ನಡೆಯಲಿದೆ.
ಗಮನಾರ್ಹವೆಂದರೆ ಎಲ್ಲ ಮಾಂಸ ಮಾರಾಟದ ಉದ್ದಿಮೆಗಳನ್ನೊಳಗೊಂಡು ಎಲ್ಲ ತರಹದ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ . ಹೋಟೆಲ್ ಹಾಗೂ ಡಾಬಾಗಳಲ್ಲಿಯೂ ಸಹ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧ ಮಾಡಲಾಗಿದೆ. BBMP ಕಾಯ್ದೆ 2020 ಮತ್ತು ಭಾರತೀಯ ಎರ್ ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರೀತ್ಯ BBMP ಯಿಂದ ಈ ಆದೇಶ ಹೊರಬಿದ್ದಿದೆ.
ಇದನ್ನು ಓದಿ :- ಕಿಲ್ಲರ್ BMTC ಬಸ್ ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ