ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ (Yadiurappa) ಮತ್ತು ಸಿದ್ಧರಾಮಯ್ಯ (Siddaramaiah) ಭೇಟಿ ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪ ಜೊತೆ ಭೇಟಿ ಅಕಸ್ಮಿಕ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಉಭಯಕುಶಲೋಪರಿ ನಡೆಸಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನ ರಾಜ್ಯ ಸಭೆಗೆ ಹಾಕಿದೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಬೇಕು ಅನ್ನೋದು ನಮ್ಮ ಉದ್ದೇಶ. ಆದರೆ ಜೆಡಿಎಸ್ ಕೂಡಾ ಅಭ್ಯರ್ಥಿ ಹಾಕಿ ಚುನಾವಣೆ ಜಟಿಲಗೊಳಿಸಿದೆ. ಕೋಮುವಾದಿ ಅಭ್ಯರ್ಥಿ ಸೋಲಿಸುವ ಉದ್ದೇಶ ಇದ್ದಿದ್ದರೆ ಅಭ್ಯರ್ಥಿ ಹಾಕುತ್ತಿರಲಿಲ್ಲ. ದೇವೆಗೌಡ (Devegowda)ರು ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ. ದೇವೆಗೌಡರು ಗೆಲ್ಲಬೇಕು ಎನ್ನುವ ಉದ್ದೇಶ ಕಾಂಗ್ರೆಸ್ಸ್ ನದ್ದಾಗಿತ್ತು. ನಾನು ಮೊದಲಿಂದಲೂ ಆರ್ ಎಸ್ ಎಸ್ (RSS) ವಿರೋಧಿ. ನನ್ನ ಆರೋಪ ಸತ್ಯ ಇರೋದ್ರಿಂದ ಚಡ್ಡಿಗಳು ಮೌನವಾಗಿದ್ದಾರೆ. ಸರಸಂಘಚಾಲಕರು ಒಂದೇ ಜಾತಿಗೆ ಸೇರಿದವರು ಎಂಬ ಆರೋಪಕ್ಕೆ ಅವರ ಬಳಿ ಉತ್ತರವಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ದಲಿತರು ಹಿಂದುಳಿದವರು ಯಾರನ್ನು ಸರಸಂಘಚಾಲಕರನ್ನಾಗಿ ಮಾಡಿಲ್ಲ ಎಂದು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ –ನಮ್ಮ ಮೂರನೇ ಅಭ್ಯರ್ಥಿ ಗೆಲುವಿಗೆ ಎರಡನೇ ಪ್ರಾಶಸ್ತ್ಯದ ಮತಗಳೇ ಸಾಕು – ಬಿಎಸ್ ವೈ
ನಾನು ಒಂದು ಕಲ್ಲಲ್ಲಿ ಎರಡೂ ಹಕ್ಕಿನೂ ಹೊಡೆದಿಲ್ಲ, ಒಂದು ಹಕ್ಕಿನೂ ಹೊಡೆದಿಲ್ಲ ಎಂದು ಹೆಚ್ ಡಿಕೆ (HDK) ಮಾತಿಗೆ ತೀರುಗೇಟು ನೀಡಿದ್ದಾರೆ. ನಮಗೆ ಬಿಜೆಪಿ-ಜೆಡಿಎಸ್ ನಿಂದ ಆತ್ಮ ಸಾಕ್ಷಿ ಮತ ಬರಲಿದೆ. ನಾವೇ ಮೊದಲು ಅಭ್ಯರ್ಥಿಯನ್ನ ಹಾಕಿದ್ದೆವು. ನಮ್ಮನ್ನ ನೋಡಿ ಅಭ್ಯರ್ಥಿ ಹಾಕಬಾರದಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ : –ಪ್ರವಾದಿ ಅವಹೇಳನ ಆರೋಪ – ಕುವೈತ್ ಸೂಪರ್ ಮಾರ್ಕೆಟ್ ನಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ನಿರ್ಬಂಧ