ಬೆಂಗಳೂರಿ (Bangalore) ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro pillar) ಕುಸಿತದಲ್ಲಿ ತಾಯಿ ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಿಎಂ ಬೊಮ್ಮಾಯಿ (Bommai) ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಮಾಹಿತಿ ಪಡೆಯುತ್ತಿದ್ದೇನೆ.
ಗದಗ (Gadag) ದ ಹೆಣ್ಣು ಮಗಳು ಹಾದು ಹೋಗುವಾಗ ಪಿಲ್ಲರ್ ತಲೆ ಮೇಲೆ ಬಿದ್ದು ಸಾವಾಗಿದೆ. ಅದು ಅತ್ಯಂತ ದುರದೃಷ್ಟಕರ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ . ಏನು ಕಾರಣ, ಯಾರು ಗುತ್ತಿಗೆದಾರ, ಎಲ್ಲವನ್ನೂ ತನಿಖೆ ಮಾಡಲಾಗುವುದು. ಸಂಬಂಧಿಸಿದವರ ಮೇಲೆ ಕೇಸ್ ಹಾಕಲು ಹೇಳಿದ್ದೇನೆ. ಮೃತಪಟ್ಟವರಿಗೆ ಮೆಟ್ರೋ ಸಂಸ್ಥೆಯಿಂದ 20 ಲಕ್ಷ ಪರಿಹಾರ ಕೊಡಲಾಗಿದೆ. ಸಿಎಂ ಪರಿಹಾರ ನಿಧಿಯಿಂದಲೂ ತಲಾ 10 ಲಕ್ಷ ರೂ. ಕೊಡಲಾಗುವುದು ಎಂದು ಹೇಳಿದ್ರು. ಇದನ್ನು ಓದಿ :-ಒಂದೊಂದು ಚುನಾವಣೆಗೆ ಸಿದ್ದರಾಮಯ್ಯ ಒಂದೊಂದು ಕ್ಷೇತ್ರಕ್ಕೆ ಯಾಕೆ ಹೋಗ್ತಿದ್ದಾರೆ..? -ಡಾ.ಕೆ. ಸುಧಾಕರ್ ಪ್ರಶ್ನೆ
ಇದೇ ವೇಳೆ 40 % ಕಮೀಷನ್ ನಿಂದಲೇ ಅವಘಡ ಎಂದು ಡಿ.ಕೆ ಶಿವಕುಮಾರ್ (DK.Shivakumar) ಆರೋಪ ವಿಚಾರವಾಗಿ ಮತನಾಡಿದ ಅವರು, ಕಾಮಾಲೆ ಕಣ್ಣಿನಿಂದ ಎಲ್ಲವನ್ನು ನೋಡಿದ್ರೆ ಹೀಗೆ. ಅವರ ಕಾಲದಲ್ಲಿ ಏನೆಲ್ಲ ಅವಘಡ ಆಗಿದೆ . ಅದಕ್ಕೆಲ್ಲ ಹಂಡ್ರೆಡ್ ಪರ್ಸೆಂಟ್ ಅಂತಾ ಹೇಳೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ :- ಆಪ್ತ ಬೆಂಬಲಿಗನ ಕ್ಷೇತ್ರ ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ರೌಂಡ್ಸ್…!