ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಪೋರ್ಟೊ ರಿಕೊದ ಸ್ಯಾನ್ ಜುವಾನ್ನಲ್ಲಿ ನಡೆದ 70 ನೇ ಆವೃತ್ತಿಯ ಮಿಸ್ ವರ್ಲ್ಡ್ 2021ರ ಸ್ಪರ್ಧೆಯಲ್ಲಿ ಕಿರೀಟವನ್ನು ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಪಡೆದುಕೊಂಡಿದ್ದಾರೆ. ಈ ಮೂಲಕ 2021ರ ವಿಶ್ವ ಸುಂದರಿಯಾಗಿ ಕರೊಲಿನಾ ಹೊರಹೊಮ್ಮಿದ್ದಾರೆ.
ಯುಎಸ್ಎ, ಇಂಡೋನೇಷ್ಯಾ, ಮೆಕ್ಸಿಕೋ, ಉತ್ತರ ಐರ್ಲೆಂಡ್ ಮತ್ತು ಕೋಟ್ ಡಿ ಐವೊರ್ ಸ್ಪರ್ಧಿಗಳನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದರು. 2019 ರ ವಿಶ್ವ ಸುಂದರಿ ಜಮೈಕಾದ ಟೋನಿ-ಆನ್ ಸಿಂಗ್ ಫೈನಲ್ನಲ್ಲಿ ಈ ಬಾರಿಯ ವಿಜೇತೆ ಕರೋಲಿನಾಗೆ ಕಿರೀಟವನ್ನು ತೊಡಿಸಿದ್ದಾರೆ.
ಸ್ಪರ್ಧೆಯಲ್ಲಿ ಯುಎಸ್ಎಯ ಶ್ರೀ ಸೈನಿ ಮತ್ತು ಕೋಟ್ ಡಿ’ಐವೊರ್ನ ಒಲಿವಿಯಾ ಯಾಸೆ ಮೊದಲ ಮತ್ತು ಎರಡನೇ ರನ್ನರ್ ಅಪ್ಗಳಾಗಿದ್ದಾರೆ. ನನಗೆ ಇನ್ನೂ ನಂಬಲಾಗುತ್ತಿಲ್ಲ. ವಿಶ್ವ ಸುಂದರಿ ಕಿರೀಟವನ್ನು ಧರಿಸಲು ನನಗೆ ಗೌರವವಿದೆ. ಪೋರ್ಟೊ ರಿಕೊದಲ್ಲಿನ ಈ ಅದ್ಭುತ ಅಧ್ಯಾಯವನ್ನು ನನ್ನ ಜೀವನದುದ್ದಕ್ಕೂ ನಾನು ನೆನಪಿಸಿಕೊಳ್ಳುತ್ತೇನೆ, ”ಎಂದು ಕರೋಲಿನಾ ಹೇಳಿದ್ದಾರೆ. ಭಾರತದ ಮಾನಸ ವಾರಣಾಸಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಾನಸಾ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.