ಶಿಕ್ಷಣ ಸಚಿವ(Education minister) ಬಿ. ಸಿ ನಾಗೇಶ್ (BC.Nagesh) ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಕ್ಕೆ ಶಿಕ್ಷಣ ಇಲಾಖೆಯ ಹಣ ದುರ್ಬಳಕೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರಕ್ಕೆ 40% ಕಮಿಷನ್ ಸಾಲದಾಗುತ್ತಿಲ್ಲವೇ ಎಂದು ಬಿಕೆ ಹರಿಪ್ರಸಾದ್ (BK.Hariprasad) ಪ್ರಶ್ನಿಸಿದ್ದಾರೆ.
ಸುಳ್ಳಿನ ವಾಟ್ಸಪ್ ಯುನಿವರ್ಸಿಟಿಯ ಫಾರ್ವರ್ಡ್ ಮೆಸೇಜ್ ಕಳಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯವಾಗಿದೆ. ಶಿಕ್ಷಣ ಇಲಾಖೆಯ ಹಣವನ್ನು ಸಚಿವರು ದುರ್ಬಳಕೆ ಮಾಡಿರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ. ಟ್ವೀಟ್ ಮೂಲಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೆ ಪಿ ನಗರದಲ್ಲಿರುವ ಪಿ-ಪೋಲ್ ಅನಾಲಿಟಿಕ್ಸ್ ಎಲ್ಎಲ್ಪಿ ಸಂಸ್ಥೆಯು ಸಚಿವ ಬಿ ಸಿ ನಾಗೇಶ್ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದೆ. ಪ್ರತಿ ತಿಂಗಳು 94,400 ರು. ಲೆಕ್ಕದಲ್ಲಿ ವರ್ಷಕ್ಕೆ 11,38,800 ರು. (ಜಿಎಸ್ಟಿ ಹೊರತುಪಡಿಸಿ) ಪಾವತಿಯಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ