ಶಾಸಕ ಅನಿಲ್ ಬೆನಕೆಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಮತದಾನ ಇಲ್ಲದವರು ಮತಗಟ್ಟೆಗೆ ಭೇಟಿ ನೀಡಲು ಅವಕಾಶ ಇಲ್ಲ. ಆದರೆ ವಿಶ್ವೇಶ್ವರಯ್ಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿರುವ ಮಾಹಿತಿ ಇದೆ. ಮಾಹಿತಿ ನೀಡುವಂತೆ ಮತಗಟ್ಟೆ ಅಧಿಕಾರಿಗೆ ನಿರ್ದೇಶನ ನೀಡಿದ್ದೇನೆ . ಮತಗಟ್ಟೆಗೆ ಭೇಟಿ ನೀಡಿರುವ ವಿಡಿಯೋಗಳು ನಮ್ಮ ಬಳಿ ಇವೆ. ಹೀಗಾಗಿ ಲಿಖಿತ ದೂರು ನೀಡುವಂತೆ ಮತಗಟ್ಟೆ ಅಧಿಕಾರಿಗೆ ಸೂಚಿಸಿದ್ದೇನೆ. ಇಂದೇ ನಮ್ಮ ಮತಗಟ್ಟೆ ಅಧಿಕಾರಿ ದೂರು ನೀಡಲಿದ್ದಾರೆ ಎಂದು ಡಿಸಿ ತಿಳಿಸಿದ್ರು. ಇದನ್ನೂ ಓದಿ : – ಈ ಬಾರಿ ಬಸವರಾಜ ಹೊರಟ್ಟಿ ಲೆಕ್ಕಾಚಾರ ತಲೆ ಕೆಳಗಾಗಲಿದೆ – ಬಸವರಾಜ ಗುರಿಕಾರ
ಮತದಾರರಿಗೆ ಹಣ, ವಾಚ್ ಹಂಚಿಕೆ ಆರೋಪ ವಿಚಾರ
ಈ ಸಂಬಂಧ ನಮಗೂ ನಿನ್ನೆ ಹಲವು ದೂರುಗಳು ಬಂದಿದ್ದವು. ನಮ್ಮ ಹಲವು ತಂಡಗಳು ಕಾರ್ಯಾಚರಣೆ ನಡೆಸಿವೆ. ಆದರೆ ಎಲ್ಲೂ ಹಣ, ವಾಚ್ ಹಂಚಿಕೆ ಪ್ರಕರಣ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : – ರಾಹುಲ್ ಸೋನಿಯಾಗೆ ED ನೋಟಿಸ್ ಜಾರಿ ಖಂಡಿಸಿ ಕಾಂಗ್ರೆಸ್ ಹೋರಾಟ