ಉಕ್ರೇನ್ ನಲ್ಲಿ (Ukraine) ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ (MBBS student) ನವೀನ್ ಗ್ಯಾನ ಗೌಡರ್ (Naveen gyan gowdar) ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ಭೇಟಿ ಮಾಡಿದ್ದಾರೆ. ಕೊಮ್ಮಘಟ್ಟದ ಸಾರ್ವಜನಿಕ ಸಮಾವೇಶದ ಹಿಂಭಾಗದಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ ನವೀನ ಗ್ಯಾನ ಗೌಡರ್ ಅವರ ತಂದೆಯನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ರು.
ಉಕ್ರೇನ್ ನಲ್ಲಿ ನವೀನ್ ಗ್ಯಾನ ಗೌಡರ್ ಎಂಬಿಬಿಎಸ್ ಓದುತಿದ್ದರು. ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆದ ಯುದ್ಧದಲ್ಲಿ ನವೀನ್ ಮೃತ ಪಟ್ಟಿದ್ದರು. ಈ ಹಿಂದೆ ನವೀನ್ ಸಾವಿಗೆ ಪಿಎಂ ಮೋದಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದರು. ಇಂದು ಮೃತ ನವೀನ್ ತಂದೆ ಶೇಖರಪ್ಪ ಹಾಗೂ ತಾಯಿ ಅವರನ್ನು ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಭೇಟಿ ಮಾಡಿದರು. ಸಿಎಂ ಬೊಮ್ಮಾಯಿ ನಿನ್ನೆಯೇ ನವೀನ್ ತಂದೆಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಇದನ್ನೂ ಓದಿ : – ಮೈಸೂರಿನಲ್ಲಿ ಮೋದಿಗಾಗಿ ಕಲಾವಿದನಿಂದ ವಿಶೇಷ ಪೇಟ..!