ಮೋದಿ ಆಧುನಿಕ ಭಸ್ಮಾಸುರ – ಕಾಂಗ್ರೆಸ್ ಮುಖಂಡ ಉಗ್ರಪ್ಪ ವ್ಯಂಗ್ಯ

ರಾಜ್ಯದಲ್ಲಿ ಡಬ್ಬಲ್ ಡೆಕ್ಕರ್ ಸರ್ಕಾರ ಇದೆ . ಪ್ರಧಾನಿ ಮೋದಿ (Modi) , ರಾಜ್ಯದಲ್ಲಿ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ (Basavaraj bommai) ಅಧಿಕಾರ ನಡೆಸ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್ . ಉಗ್ರಪ್ಪ (VS.Ugrappa) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಇವರ ಅಧಿಕಾರದ ಅವಧಿಯಲ್ಲಿ ಸಾಮಾಜಿಕ ನ್ಯಾಯವನ್ನ ಧಮನ ಮಾಡ್ತಿದ್ದಾರೆ . ಎಸ್ಸಿ, ಎಸ್ಟಿ, ಮೈನಾರಿಟಿ ಮಕ್ಕಳ ಮೇಲಿನ ಭವಿಷ್ಯದ ಮೇಲೆ ಚಪ್ಪಡಿ ಎಳೆದಿದ್ದಾರೆ.

BJP upbeat after wins in Vijayapura, Kollegal ULB polls | Deccan Herald

22.56 ಕೋಟಿ ಮೆಟ್ರಿಕ್ ಪೂರ್ವದ ವಿದ್ಯಾರ್ಥಿ (Students) ಗಳಿದ್ದಾರೆ.14.78 ಲಕ್ಷ ಶಾಲೆಗಳಿವೆ , 10.22 ಲಕ್ಷ ಸರ್ಕಾರಿ ಶಾಲೆಗಳಿವೆ . ಶಿಕ್ಷಣ ಹಕ್ಕು ಕಾಯ್ದೆಯಡಿ ಕಡ್ಡಾಯ ಶಿಕ್ಷಣವನ್ನು ಮನಮೋಹನ್ ಸಿಂಗ್ (Manmohan singh) ತಂದಿದ್ರು. ಮಕ್ಕಳಿಗೆ ಮೊದಲು 75:25 ಅನುಪಾತದಲ್ಲಿ ವಿದ್ಯಾರ್ಥಿ ವೇತನ ನೀಡಲಾಗ್ತಿತ್ತು. ಈಗ 60:20 ಅನುಪಾತ ಇದೆ ಅಂತ ಈಗಿನ ಅಧಿಕಾರಿ ಮಣಿವಣ್ಣನ್ ಹೇಳ್ತಿದ್ದಾರೆ . 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ ಶಿಪ್ (Scholar ship) ನ್ನ ಮೋದಿ ನಿಲ್ಲಿಸಿದ್ದಾರೆ. ಮೋದಿ ಆಧುನಿಕ ಭಸ್ಮಾಸುರ ಎಂದು ಲೇವಡಿ ಮಾಡಿದ್ರು. ಮಕ್ಕಳ ಭವಿಷ್ಯದ ಮೇಲೆ ಬಿಜೆಪಿ ಚೆಲ್ಲಾಟವಾಡುತ್ತಿದೆ. ಬ್ಯಾಂಕ್ ಗಳ ಸಾಲ ಮನ್ನಾ ಮಾಡ್ತಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತರ ಪರ ಈ ಸರ್ಕಾರ ಇದೆ. ಬಡ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡಲು ಆಗದ ಸರ್ಕಾರ ಅದಾನಿ ಅಂಬಾನಿ (Ambani) ಗಳಿಗೆ ಸಾಲ ಮನ್ನಾ ಮಾಡ್ತಾರೆ. 2013 ರಲ್ಲಿ ನಮ್ಮ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ . ಎಸ್ಟಿ ಎಸ್ಟಿ ವೆಲ್ಫೇರ್ ಗಾಗಿ ಎಲ್ಲಾ ಇಲಾಖೆಯಲ್ಲಿ ಅನುದಾನ ಮೀಸಲಿಡಬೇಕು ಎಂದು ಕಾನೂನು ಮಾಡಲಾಗಿತ್ತು. 30 ಸಾವಿರ ಕೋಟಿ ಪ್ರತಿ ವರ್ಷ ಅನುದಾನ ಬಳಕೆ ಮಾಡಬೇಕು ಅಂತ ಅನುದಾನ ನೀಡಲಾಗ್ತಿತ್ತು. 29,165 ಕೋಟಿ ಈ ವರ್ಷದಲ್ಲಿ ಅನುದಾನ ನೀಡಲಾಗಿದೆ. ಇಲ್ಲೀತನಕ ಇದರಲ್ಲಿ 15% ಗಿಂತ ಕಡಿಮೆ ಅನುದಾನ ಬಳಕೆ ಆಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೇವಲ 2.2% , ಸ್ಕಿಲ್ ಡೆವಲಪ್ಮೆಂಟ್ ಇಲಾಖೆಯಲ್ಲಿ 4.6% ಬಳಕೆ ಆಗಿದೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಾವು. ಇಷ್ಟು ವರ್ಷ ಸುಮ್ಮನಿದ್ದು ಈಗ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಅಂತ ಹೇಳ್ತಾರೆ . ಸುಗ್ರೀವಾಜ್ಞೆ ಆದ ಮೀಸಲಾತಿ ಬಗ್ಗೆ ಸರ್ಕಾರಿ ಆದೇಶ ಆಗಿಲ್ಲ . ಇದನ್ನೂ ಓದಿ : – ತಮಿಳು ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ನಿಧನ

It's quota or quit: Sriramulu on Valmiki reservation | Deccan Herald

ಅಧಿಕಾರಿಗಳು ಕೂಡ ಈಗ ಆಗಬಹುದು ಆಗ ಆಗಬಹುದು ಅಂತಿದ್ದಾರೆ. ಹಾಗಿದ್ದಾಗ ಸುಗ್ರೀವಾಜ್ಞೆ ತರುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ರು. ಶ್ರೀರಾಮುಲು (Sri ramulu) , ಕೋಟ ಶ್ರೀನಿವಾಸ ಪೂಜಾರಿ (Kota srinivas poojari) ಅವರು ಇದಕ್ಕೆ ಉತ್ತರ ಕೊಡಲಿ. ಶ್ರೀರಾಮುಲು ನಾವೇನು ಬಳೆ ತೊಟ್ಟುಕೊಂಡಿಲ್ಲ ಅಂತ ಹೇಳಿಕೆ ಕೊಡ್ತಾರೆ. ಸಮಸ್ತ ಹೆಣ್ಣು ಮಕ್ಕಳಿಗೆ ಶ್ರೀರಾಮುಲು ಅಪಮಾನ ಮಾಡಿದ್ದಾರೆ. ಎಸ್ಸಿ ಎಸ್ಟಿ ಅನುದಾನದಲ್ಲಿ 15% ಗಿಂತ ಕಡಿಮೆ ಬಳಕೆ ಮಾಡಿದ್ದಾರೆ . ಇದರ ಬಗ್ಗೆ ರಾಮುಲು ಯಾಕೆ ಮಾತನಾಡ್ತಿಲ್ಲ. ಮಕ್ಕಳ ಸ್ಕಾಲರ್ ಶಿಪ್ ಕಿತ್ತುಕೊಂಡಿರೋದರ ಬಗ್ಗೆ ಯಾಕೆ ಮಾತನಾಡಲ್ಲ ಎಂಧು ಹೇಳಿದರು.
ಇದೇ ವೇಳೆ ಬೆಂಗಳೂರು ರೇಪ್ ಸಿಟಿ ಆಗ್ತಿದೆ. ಅತ್ಯಾಚಾರಿಗಳ ನಗರವಾಗ್ತಿದೆ. ಬೊಮ್ಮನಹಳ್ಳಿ, ಮಾಗಡಿ ಭಾಗದಲ್ಲಿ ರೇಪ್ ಆಗಿವೆ. ಹದಗೆಟ್ಟ ಕಾನೂನು ಸುವ್ಯವಸ್ಥೆ ಸರಿಪಡಿಸ್ತಿಲ್ಲ.

Karnataka Voter List 2023- CEO Karnataka Electoral Roll PDF

ಅಧಿಕಾರ ಕಳೆದುಕೊಳ್ಳುವ ಭಯ ಶುರುವಾಗಿದೆ ಎಂದು ಹೇಳಿದ್ರು. ಅದಕ್ಕೆ ವಾಮಮಾರ್ಗಗಳನ್ನ ಅನುಸರಿಸುತ್ತಿದ್ದಾರೆ. ಮತದಾರರ ಹೆಸರನ್ನ ಡಿಲೀಟ್ ಮಾಡ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಏನೂ ಆಗಿಯೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಆಯೋಗ ಈಗ ಕ್ರಮಗಳನ್ನ ಜರುಗಿಸ್ತಿದೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ : –  ಮಧುಗಿರಿ ಕ್ಷೇತ್ರಕ್ಕೆ ತಲುಪಿದ ಜೆಡಿಎಸ್ ಪಂಚರತ್ನ ರಥಯಾತ್ರೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!