ಮೋದಿ ( NARENDRA MODI ) ಸಾಧನೆ ನೋಡಿ ಬಿಜೆಪಿ (BJP) ಗೆ ಮತ ಹಾಕ್ತಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಪೆಟ್ರೋಲಿಯಂ ಬೆಲೆ ಹೆಚ್ಚಾಗಿರೋದು ಒಳ್ಳೆಯದಾ ? ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಒಳ್ಳೆಯದಾ ? ಜನರನ್ನು ಸಾಲದ ಸುಳಿಗೆ ಸಿಲುಕಿ ಸಿದ್ದಾರೆ ಅದರ ಅದು ಒಳ್ಳೆಯದಾ ? ದೇಶದಲ್ಲಿ ಸಾಲದ ಪ್ರಮಾಣ ತೀವ್ರ ಹೆಚ್ಚಳವಾಗಿದೆ ಇದು ಒಳ್ಳೆಯದಾ ಅಂತ ಪ್ರಶ್ನಿಸಿದ್ದಾರೆ. ಕಟೀಲ್ ಬಿಜೆಪಿ ಅಧ್ಯಕ್ಷರಾಗೋಕೆ ಲಾಯಕ್ ಅಲ್ಲ. ಏನ್ ಏನೋ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇದನ್ನೂ ಓದಿ : – ಮಂಕಿಪಾಕ್ಸ್ ಬಗ್ಗೆ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ – ಡಾ. ಕೆ ಸುಧಾಕರ್
ಕಟೀಲ್ ಪ್ರಬುದ್ಧ ರಾಜಕಾರಣಿ ಅಲ್ಲ. ಆಧಾರದ ರಹಿತ ಆರೋಪವನ್ನು ಕಟೀಲ್ ಮಾಡುತ್ತಿದ್ದಾರೆ.
ಕಟೀಲ್ ಸುಳ್ಳು ಹೇಳುತ್ತಿದ್ದಾರೆ. ಪಠ್ಯ ಪುಸ್ತಕದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಿದ್ದಾರೆ.
ಅಂಬೇಡ್ಕರ್ ಬಗ್ಗೆ ಚರಿತ್ರೆಯ ಅಗತ್ಯತೆ ಇದೆ. ಸಂವಿಧಾನ ಶಿಲ್ಪಿ ಅನ್ನೋದನ್ನು ತಗೆದು ಹಾಕಿದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಕುವೆಂಪು ಫೋಟೋ ತೆಗೆದು ಹಾಕಿದ್ರೆ ಅವಮಾನ ಅಲ್ಲವೆ? ನಾರಾಯಣಗುರು, ಬಸವಣ್ಣ, ಸುರಪುರ ನಾಯಕರನ್ನು ಅವಮಾನ ಮಾಡಿ ಪಠ್ಯವನ್ನು ಕೇಸರಿಕರಣ ಮಾಡಲು ಹೋರಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ವಿದ್ಯಾರ್ಥಿಗಳಿಗೆ ವೈಚಾರಿಕ ಶಿಕ್ಷಣ ಸಿಗಬೇಕು. ಇತಿಹಾಸ ತಿರುಚುವ ಕೆಲಸ ಮಾಡಬಾರದು. ಮುಖ್ಯಮಂತ್ರಿ, ಶಿಕ್ಷಣ ಸಚಿವರು ತಪ್ಪು ತಿದ್ದುತ್ತೇವೆ ಎಂದಿದ್ದಾರೆ. ಅಂದ ಮೇಲೆ ನಾವೇಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಅಂಬೇಡ್ಕರ್. ಅದನ್ನು ಮಕ್ಕಳಿಗೆ ಹೇಳದೆ ಇದ್ರೆ ಹೇಗೆ. ಸಮಿತಿ ವಿಸರ್ಜನೆ ಮಾಡಿ, ಪಠ್ಯ ಮುಂದುವರೆಸಿದ್ರೆ ಹೇಗೆ ಎಂದು ಕೇಳಿದ್ದಾರೆ. ವೈಚಾರಿಕ, ವೈಜ್ಞಾನಿಕ ಮನೋಭಾವ ಇರೋ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : – ಒಂದು ವಾರದಲ್ಲಿ ಪಠ್ಯವನ್ನು ಪಬ್ಲಿಕ್ ಡೊಮೈನ್ ನಲ್ಲಿ ಇಡ್ತೀವಿ – ಬಿ.ಸಿ ನಾಗೇಶ್