ತುಂಗಭದ್ರ ನದಿಯ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿ ಒಬ್ಬರು ಸವನ್ನಪ್ಪಿದ ಘಟನೆ ರಾಯಚೂರು (RAICHURU ) ಜಿಲ್ಲೆಯ ಮಾನ್ವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜುಕೂರು ಗ್ರಾಮದಲ್ಲಿ ಜರುಗಿದೆ.
ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರ ನದಿಯ (THUNGABHADRA) ಕಲುಷಿತ ನೀರು ಕುಡಿದು 7 ಜನ ಮೃತಪಟ್ಟಿದ್ದಾರೆ. ಈಗ ಗ್ರಾಮಾಂತರ ಪ್ರದೇಶದ ಜುಕೂರು ಗ್ರಾಮದ ಮಹಿಳೆ ಲಕ್ಷ್ಮಿ (28 ) ಮೃತಪಟ್ಟಿದ್ದಾಳೆ. ಕಲುಷಿತ ನೀರು ಸೇವಿಸಿದ ಲಕ್ಷ್ಮಿ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ ಮರ್ಚಟಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು.
ರಕ್ತದ ಒತ್ತಡದಲ್ಲಿ ಏರುಪೇರಾದ ಹಿನ್ನಲೆಯಲ್ಲಿ, ರಿಮ್ಸ್ ಆಸ್ಪತ್ರೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. 40ಕ್ಕೂ ಅಧಿಕ ಜನರಲ್ಲಿ ವಾಂತಿ ಭೇದಿ ಕಂಡುಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ, ಸಮುದಾಯಭವನದಲ್ಲಿ ಹೊರ ರೋಗಿಗಳ ವಿಭಾಗ ಆರಂಭಿಸಿದ್ದಾರೆ.
ಇದನ್ನೂ ಓದಿ :- ರಾಯಚೂರಿನಲ್ಲಿ ಚಿರತೆ ಸೆರೆ ಹಿಡಿಯಲು ಚುರುಕುಗೊಂಡ ಕಾರ್ಯಾಚರಣೆ