ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಮಾಜ್ ಮಾಡಿರೋ ವಿಡಿಯೋ ವೈರಲ್ ವಿಚಾರ ಕುರಿತಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಗರ್ಭಗುಡಿ, ಪೂಜೆ, ಮೇನೇಜ್ಮೆಂಟ್ ಈ ವಿಚಾರ ಮಾತ್ರ ಕೋರ್ಟ್ ಮುಂದಿರೋ ವಿವಾದಿತ ಪ್ರದೇಶ. ಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ, ಆಗೋಕೆ ಬಿಡಲ್ಲ ಎಂದು ಹೇಳಿದ್ದಾರೆ. ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ.
ವಿಡಿಯೋ ಜಾಗ, ವಿವಾದಿತ ಜಾಗದಿಂದ ದೂರ ಇದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ವಿಡಿಯೋ ಪರಿಶೀಲಿಸಿದ್ದೇವೆ. ಈ ವಿಡಿಯೋ ಹಳೇ ವಿಡಿಯೋ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ರೂ ವಿಡಿಯೋ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ :- ಚಿಕ್ಕಮಗಳೂರಿನ ದತ್ತಪೀಠದಲ್ಲಿ ವಿವಾದದ ಮೇಲೆ ವಿವಾದ…?
ದತ್ತಪೀಠದ ಆವರಣದಲ್ಲಿ ನಮಾಜ್ ಮಾಡುವಂತೆ ಕಾಣುತ್ತಿರುವ ವೀಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿತ್ತು. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ದತ್ತಪೀಠದ ಆವರಣದಲ್ಲೇ ನಮಾಜ್ ಮಾಡುತ್ತಿದ್ದಾರೆ. ಆವರಣ ಮಾತ್ರವಲ್ಲ, ಗುಹೆಯ ಒಳಗೂ ನಮಾಜ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ :- ಸಿಎಂ ದಾವೋಸ್ ಪ್ರವಾಸ ಅನುಮಾನ –? ವರಿಷ್ಟರ ಕಣ್ಣಾಮುಚ್ಚಾಲೆ ಆಟ – ಸಿಎಂಗೆ ಸಂಕಟ..!