ಆರೋಗ್ಯ ಸಚಿವ ಡಾ.ಕೆ ಸುಧಾಕರ್ ( K. SUDHAKAR ) ತವರು ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಹಸುಗೂಸು ಬಲಿಯಾಗಿದೆ. ಕಣ್ಣು ತೆರೆಯುವ ಮುನ್ನವೇ ಕಣ್ಣು ಮುಚ್ಚಿಸಿದ್ದಾರೆ ವೈದ್ಯರು . ಜನಿಸಿದ ಮೂರೇ ದಿನಕ್ಕೆ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವನಪ್ಪಿದೆ .
ತಾಲ್ಲೂಕಿನ ಕಾನಗಮಾಕಲಹಳ್ಳಿ ಗ್ರಾಮದ ಮಂಜುಳ ರಮೇಶ್ ದಂಪತಿ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು ಮಕ್ಕಳ ತಜ್ಞರ ಬಳಿ ತೋರಿಸಿದ್ದಾರೆ . ವೈದ್ಯರ ಸೂಚನೆಯಂತೆ ಎರಡು ಹನಿ ಟಾನಿಕ್ ನೀಡಲಾಗಿತ್ತು. ಅರ್ಧ ಗಂಟೆಗೆ ಮಗುವಿನ ಚಲನವಲನದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಮತ್ತೆ ವೈದ್ಯರ ಬಳಿ ತೋರಿಸಿದಾಗ ಮಗು ಸಾವನ್ನಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಮುರಿದು ಬಿತ್ತೇ ದಶಕಗಳ ಗೆಳೆತನದ ನಂಟು..?
ಸಮಯಕ್ಕೆ ಸರಿಯಾಗಿ ವೈದ್ಯರು ನರ್ಸ್ ಗಳು ಇಲ್ಲದ ಕಾರಣ ಮಗು ಸಾವನ್ನಪ್ಪಿದೆ ಎಂಬ ಆರೋಪವನ್ನು ಮಗುವಿನ ಪೋಷಕರು ಹೇಳಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : – ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ನಾಳೆಯಿಂದ ಮಳೆಯ ಅಬ್ಬರ ಸಾಧ್ಯತೆ