ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ನಾಮಕರಣ ಶಾಸ್ತ್ರ ನಡೆಯಿತು.
ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡಲಾಗಿದೆ. ಮಗುವಿಗೆ ಆವ್ಯನ್ ದೇವ್ ಎಂದು ಹೆಸರಿಡಲಾಗಿದೆ. ಪ್ರಪೌತ್ರ ಜನನ ಶಾಂತಿ, ನಾಮಕರಣ ಹಾಗೂ ಕನಕಾಭಿಷೇಕ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಇದನ್ನೂ ಓದಿ :- ಮೈದಾನದ ಮಾಲೀಕರು ಯಾರು ಅಂತ ಹೇಳ್ತಾರೋ ಅವ್ರು ದಾಖಲೆ ಇದ್ದರೆ ಕೊಡಲಿ – ತುಷಾರ್ ಗಿರಿನಾಥ್
ನಿಖಿಲ್ ಮತ್ತು ರೇವತಿ ದಂಪತಿಯ ಈ ಮಗುವಿಗೆ ಈಗ ಒಂಬತ್ತು ತಿಂಗಳು. ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆಯಿತು. ದೊಡ್ಡಗೌಡರ ಕುಟುಂಬ ನಾಮಕರಣ ಶಾಸ್ತ್ರದಲ್ಲಿ ಭಾಗಿಯಾಗಿತ್ತು.
ಇದನ್ನೂ ಓದಿ :- ಮೈಕ್ ದಂಗಲ್ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ