ಗಡಿ ವಿಚಾರದಲ್ಲಿ ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ – ಅಮಿತ್ ಶಾ

ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿರುವ ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು.

ಕರ್ನಾಟಕ (Karnataka) ಮಹಾರಾಷ್ಟ್ರ (Maharastra) ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿರುವ ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು. ಬೀದಿ ಘರ್ಷಣೆಗಳಿಂದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರವಾಗಿ ಇಂದು ನಡೆದ ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ.

https://www.kannadaprabha.com/nation/2022/dec/14/maharashtra-karnataka-border-row-issues-can-be-settled-only-by-constitutional-methods-not-on-road-says-home-minister-amit-shah-482863.html

ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು, ಎರಡೂ ರಾಜ್ಯಗಳ ಸಿಎಂಗಳು ಸಾಂವಿಧಾನಿಕ ರೀತಿಯಲ್ಲಿ ನಿರ್ಣಯವನ್ನು ತಲುಪಬೇಕು ಎಂದು ಒಪ್ಪಿಕೊಂಡರು. ಸುಪ್ರೀಂ ಆದೇಶ ಬರುವವರೆಗೂ ಉಭಯ ರಾಜ್ಯಗಳು ವಿವಾದಿತ ಪ್ರದೇಶ ನಮ್ಮದು ಎಂದು ಹೇಳುವಂತಿಲ್ಲ.ಗಡಿ ವಿವಾದವನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದೇ ವಿನಃ ಬೀದಿ ಘರ್ಷಣೆಗಳಿಂದಲ್ಲ ಎಂದು ಹೇಳಿದ್ರು. ಇದನ್ನು ಓದಿ : –  ಸಾರ್ವಜನಿಕ ಕಾರ್ಯಕ್ರಮಕ್ಕೆ ನನ್ನನ್ನು ಯಾರು ಕರೆಯಬೇಕಾಗಿಲ್ಲ – ಯಡಿಯೂರಪ್ಪ

ಇದೇ ವೇಳೆ ಗಡಿ ವಿವಾದ ಇತ್ಯರ್ಥ ಸಂಬಂಧ ಸಣ್ಣಪುಟ್ಟ ಸಮಸ್ಯೆಗಳ ಇತ್ಯರ್ಥಕ್ಕೆ ಉಭಯ ರಾಜ್ಯಗಳ ಮೂರು ಸಚಿವರನ್ನು ಒಳಗೊಂಡ ತಟಸ್ಥ ಸಮಿತಿ (Committe) ಯನ್ನು ರಚಿಸಲಾಗುವುದು ಎಂದು ಹೇಳಿದರು. ರಾಜ್ಯಗಳ ಗಡಿ ಸಮಸ್ಯೆಗಳನ್ನು ಪರಿಹರಿಸಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಮಂತ್ರಿಗಳೊಂದಿಗೆ ಕೇಂದ್ರವು 6 ಸದಸ್ಯರ ತಂಡವನ್ನು ರಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಪರಿಶೀಲಿಸಲು ಹಿರಿಯ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು.

Image

ಸಣ್ಣಪುಟ್ಟ ಸಮಸ್ಯೆಗಳಲ್ಲಿ ಸಮತಿಯ ಮುಂದೆ ತಂದು ಪರಿಹರಿಸಿಕೊಳ್ಳಬೇಕು. ಆದ್ದರಿಂದ ಯಾವುದೇ ರಾಜ್ಯದ ಪ್ರಯಾಣಿಕರು ಮತ್ತು ವ್ಯಾಪಾರಿಗಳು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುವವರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗುವುದು. ಅಂತೆಯೇ ಗಡಿ ವಿವಾದವನ್ನು ರಾಜಕೀಯಗೊಳಿಸಬೇಡಿ ಮತ್ತು ಸುಪ್ರೀಂ ಕೋರ್ಟ್ ನ ತೀರ್ಪಿಗಾಗಿ ಕಾಯಿರಿ.ಗೃಹ ಸಚಿವನಾಗಿ ನಾನು ಮಹಾರಾಷ್ಟ್ರ ಮತ್ತು ಕರ್ನಾಟಕದ ವಿರೋಧ ಪಕ್ಷಗಳಿಗೆ ರಾಜ್ಯಗಳ ಗಡಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಇದನ್ನು ಓದಿ : –  ಕೊಪ್ಪಳಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!