ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲ. ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಒಂಟಿ ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಬದಲಾಗಿ ವಿಲೀನ ಮಾಡ್ತೇವೆ. ಕನ್ನಡ ಶಾಲೆ, ಉರ್ದು,ಮರಾಠಿ ತಮಿಳು ಶಾಲೆ ಯಾವುದೇ ಇದ್ರೂ ಸಹ ವಿಲೀನ ಮಾಡಲಾಗುವುದು. ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಬಾಲಕರು ಬಾಲಕಿಯರು ಸಮಪಾಲು ಬರೆಯುತ್ತಿದ್ದಾರೆ. ಅಧಿಕಾರಿಗಳ ಮೇಲೆ ವಿಶ್ವಾಸ ವಿದ್ದು ಪರೀಕ್ಷೆ ಉತ್ತಮವಾಗಿ ನಡೆಯುತ್ತದೆ.
ಪಿಯುಸಿಯ ಪರೀಕ್ಷೆ ಎಲ್ಲಾ ಮಕ್ಕಳಿಗೂ ಶುಭಕೋರುತ್ತೇನೆ. ಎರಡು ವರ್ಷದಿಂದ ಮಕ್ಕಳಿಗೆ ಪರೀಕ್ಷೆ ಇರಲಿಲ್ಲ. ಎಲ್ಲಾ ಮಕ್ಕಳು ಧೈರ್ಯ ದಿಂದಿದ್ದಾರೆ. ಸಿದ್ಧತೆ ಹೇಗಿದೆ ಎಂಬುದನ್ನು ನೋಡೋಕೆ ಇಲ್ಲಿಗೆ ಬಂದಿದ್ದೆ. ಎಲ್ಲಾ ಸಿದ್ಧತೆ ಗಳು ಶಿಕ್ಷಕರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಧೈರ್ಯ ತುಂಬಿ ಪರೀಕ್ಷೆ ಬರೆಸುತ್ತಾರೆಂದು ವಿಶ್ವಾಸ ನನಗಿದೆ ಎಂದು ಹೇಳಿದ್ರು.
ಇದನ್ನು ಓದಿ :– ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಪರೀಕ್ಷೆ ಬರೆಯಲು ಸಜ್ಜಾದ ವಿದ್ಯಾರ್ಥಿಗಳು