ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಚುನಾವಣೆಗೆ ಸ್ಪರ್ಧೆ ಮಾಡಿದರೆ ಅವತ್ತೆ ನಾನು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಸ್ಪರ್ಧಿಸಿದರೆ ಅವತ್ತೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ. ಮೊದಲಿಂದಲೂ ನಾವು ಇಬ್ಬರು ರಾಜಕಾರಣದಲ್ಲಿ ಇದ್ದೇವೆ. ನಿರಾಣಿ ಕುಟುಂಬದ ಮೂರನೇಯರು ರಾಜಕೀಯಕ್ಕೆ ಬರ್ತಿಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ನಿರಾಣಿ ಕುಟುಂಬದ ಮೂರನೇ ವ್ಯಕ್ತಿಯ ಸ್ಪರ್ಧೆ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದರು. ಸಹೋದರ ಸಂಗಮೇಶ ನಿರಾಣಿ ಕಳೆದ 4 ವರ್ಷದಿಂದ ಜಮಖಂಡಿಯಲ್ಲಿ ಸಭೆ ಸಮಾರಂಭ ಮಾಡಿಲ್ಲ. ಇದನ್ನೂ ಓದಿ : – ರಾಜ್ಯಾದ್ಯಂತ ಏಕಕಾಲಕ್ಕೆ 70 ಕಡೆಗಳಲ್ಲಿ IT ದಾಳಿ – ಭ್ರಷ್ಟರ ಬೇಟೆ
ನಾನು ನನ್ನ ಸಹೋದರ ಹನುಮಂತ ನಿರಾಣಿ ಹೊರತುಪಡಿಸಿ ನಮ್ಮ ಮನೆಯಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ನನ್ನ ಮಾತು ಕೇಳದೇ ನಮ್ಮ ಕುಟುಂಬದವರು ರಾಜಕೀಯಕ್ಕೆ ಎಂಟ್ರಿಯಾದರೆ ಅವತ್ತೇ ನಾನು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುತ್ತೇನೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ವಿಧಿವಶ