ನನಗೆ ಮಂತ್ರಿ ಸ್ಥಾನ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavraj bommai) ಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಈಶ್ವರಪ್ಪ (KS.Eshwarappa) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಂತೋಷ್ ಪಾಟೀಲ್ (Santhosh patil) ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ .
ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ . ಆದ್ರು ನನಗೆ ಕ್ಲಿನ್ ಚಿಟ್ ಸಿಕ್ಕಿದೆ. ಬಳಿಕ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದೆ. ಮಾಡ್ತೀನಿ ಅಂತ ಭರವಸೆ ನೀಡಿದ್ರು. ಆದ್ರೆ ಈಗ ಅವರಿಗೆ ಏನೇನು ಸಮಸ್ಯೆ ಇದೀಯೋ ಅನ್ನೋದು ಗೊತ್ತಿಲ್ಲ. ಸಚಿವ (Minister) ಸ್ಥಾನ ನನಗೆ ಬೇಡ ಎಂದು ಹೇಳಿ ಬಂದಿದ್ದೇನೆ. ಇವತ್ತು ಸಿಎಂ ಭೇಟಿ ಮಾಡಿದಾಗಲೂ ಹೇಳಿ ಬಂದಿದ್ದೇನೆ ಎಂದು ಹೇಳಿದ್ರು. ಇದನ್ನೂ ಓದಿ : – ಕೋಲಾರದಲ್ಲಿ ಬಂಡಾಯದ ಬಾವುಟ ಹಾರಿಸಿದ್ರಾ ಕೆ.ಎಚ್ ಮುನಿಯಪ್ಪ ?
ಇದೇ ವೇಳೆ ಡಿ.ಕೆ ಶಿವಕುಮಾರ್ (DK.Shivakumar) ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಅಂತ ನೆನಪು ಮಾಡಿಕೊಳ್ಳಲಿ. ಇಡಿ, ಐಟಿ, ಸಿಬಿಐ ಯಾಕೆ ತನಿಖೆ ಮಾಡುತ್ತಿದೆ. ಭ್ರಷ್ಟಾಚಾರ, ಅಕ್ರಮ ಹಣ ವಿಚಾರವಾಗಿ ಅಲ್ವಾ. ಕಂತೆ ಕಂತೆ ನೋಟು ಸಿಕ್ಕಿತ್ತು ಅಲ್ವಾ. ಈಗ ಬಸ್ ಯಾತ್ರೆ ವೇಳೆ ಭ್ರಷ್ಟಾಚಾರ (Corruption) ಮಾತನಾಡುವುದು ಹಾಸ್ಯಾಸ್ಪದ ಎಂದು ಡಿ ಕೆ ಶಿವಕುಮಾರ್ ಭ್ರಷ್ಟಾಚಾರ ಆರೋಪಕ್ಕೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : – ರಾಜ್ಯದಲ್ಲಿ ಅಮುಲ್ ಹಾಲಿನ ಬೆಲೆ ಮತ್ತೆ ಹೆಚ್ಚಳ ..!