ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಸೂಚನೆ- ಬೊಮ್ಮಾಯಿ

ಕರ್ನಾಟಕ- ಮಹಾರಾಷ್ಟ್ರ ಗಡಿ ಸಂಘರ್ಷ ವಿಚಾರವಾಗಿ ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕ (Karnataka) – ಮಹಾರಾಷ್ಟ್ರ (Maharastra) ಗಡಿ ಸಂಘರ್ಷ ವಿಚಾರವಾಗಿ ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಐಪಿಎಸ್ ಅಧಿಕಾರಿ ನೇಮಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸೂಚನೆ ನೀಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು 2004 ರಿಂದ ಏನೆಲ್ಲ ಆಯ್ತು ಎಂದು ಸಭೆಯಲ್ಲಿ ವಿವರಿಸಿದ್ದೇನೆ. ಮಹಾರಾಷ್ಟ್ರದವರು ತಮ್ಮ ವಾದ ಮುಂದಿಟ್ಟರು.

ಎರಡು ವಾದವನ್ನು ಕೇಳಿದ ಬಳಿಕ ಕೆಲವು ನಿರ್ದೇಶನ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ. ರಾಜಕೀಯ ಹೊರೆತಾಗಿ ಒಂದಾಗಿ ಇರುವ ಬಗ್ಗೆ ಹೇಳಿದ್ದಾರೆ. ಅಂತೆಯೇ ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ತಟಸ್ಥ ಸಮಿತಿಯಲ್ಲೇ ಪರಿಹರಿಸಿಕೊಳ್ಳಬೇಕು.ಜನರ ನಡುವೆ ಏನು ಸಮಸ್ಯೆ ಇಲ್ಲ. ಈ ಬಗ್ಗೆ ಯಾರು ಕೂಡ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಲಿದೆ. ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳಿದ್ದರೆ ತಟಸ್ಥ ಸಮಿತಿಯಲ್ಲಿ ಚರ್ಚಿಸಿ ಸರಿ ಮಾಡಿಕೊಳ್ಳುವಂತೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಿದ್ರು. ಗಡಿ ವಿವಾದ ಜನವರಿಯಲ್ಲಿ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ನಾನು ಗಡಿಯಲ್ಲಿನ ವಾಸ್ತವ ಸ್ಥಿತಿಗತಿ ಬಗ್ಗೆ ಹೇಳಿದ್ದೇನೆ. ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಆಯಾ ರಾಜ್ಯದಲ್ಲಿ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನು ಓದಿ : – ಗಡಿ ವಿಚಾರದಲ್ಲಿ ಸುಪ್ರೀಂ ಆದೇಶದವರೆಗೂ ಯಾವುದೇ ನಿರ್ಧಾರ ಸಾಧ್ಯವಿಲ್ಲ – ಅಮಿತ್ ಶಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!