ಇಂದು KSRTC ಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮೊದಲ ಇವಿ ಬಸ್, ಪ್ರಯಾಣಿಕರನ್ನು ಕರೆದುಕೊಂಡು ಮೈಸೂರಿಗೆ ಪ್ರಯಾಣ ಆರಂಭಿಸಿದೆ.
ಮೊದಲ ಇವಿ ಬಸ್ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರಯಾಣಿಕರನ್ನ ಕೆಎಸ್‍ಆರ್ ಟಿಸಿ ಸಿಬ್ಬಂದಿ ಸ್ವಾಗತಿಸಿದ್ದಾರೆ. ಬೆಳಗ್ಗೆ 6.45ಕ್ಕೆ ಬಸ್‍ಗೆ ಚಾಲನೆ ಸಿಕ್ಕಿದ್ದು, ಮೈಸೂರಿಗೆ 8.45 ಕ್ಕೆ ತಲುಪಲಿದೆ. ಬಸ್ ದರ ವೋಲ್ವೋ ಬಸ್ ಗಿಂತ ಕಡಿಮೆ ಇದ್ದು 300 ರೂಪಾಯಿ ನಿಗದಿ ಮಾಡಲಾಗಿದೆ. ಇದನ್ನು ಓದಿ :- ಗವಿಗಂಗಾಧರೇಶ್ವನ ದೇವಾಲಯದಲ್ಲಿ ಗರ್ಭಗುಡಿ ಪ್ರವೇಶಿಸಿದ ಸೂರ್ಯ ರಶ್ಮಿ
ಇದು ಪರಿಸರ ಸ್ನೇಹಿ ಬಸ್ ಆಗಿದ್ದು, ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ. ಹಂತಹಂತವಾಗಿ ರಾಜ್ಯದ ನಾನಾ ಕಡೆಗೆ ಈ ಇವಿ ಬಸ್ ಸೇವೆಯನ್ನ ಆರಂಭಿಸೋದಾಗಿ ಕೆಎಸ್‍ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ 50 ಬಸ್ ಗಳನ್ನ ರಸ್ತೆಗೆ ಇಳಿಸುವ ಉದ್ದೇಶವನ್ನ ನಿಗಮ ಹೊಂದಿದೆ. ಇಂದು ಇದರ ಮೊದಲ ಬಸ್ ಸೇವೆ ಆರಂಭವಾಗಿದೆ.
ಇದನ್ನು ಓದಿ :- ವೀರಶೈವ ಲಿಂಗಾಯಿತ ಸಮಾಜ ದೊಡ್ಡ ಆಲದಮರ ಇದ್ದ ಹಾಗೆ – ಬಿ.ವೈ ವಿಜಯೇಂದ್ರ