ಡಿ.29ರಂದು ರಾಜಧಾನಿ ಬೆಂಗಳೂರಿ (Bangalore) ನಲ್ಲಿ ಆಟೋ (Auto) ಸಮಸ್ಯೆ ಉಂಟಾಗಲಿದೆ. ಆಟೋ ಚಾಲಕರು ಅಂದು ಬೆಂಗಳೂರಿನಲ್ಲಿ ಮುಷ್ಕರ (Strike) ಕ್ಕೆ ಕರೆ ನೀಡಿದ್ದಾರೆ. ಡಿ.29ರಂದು ಬೆಂಗಳೂರು ನಗರದಲ್ಲಿ ಆಟೋ ಸಂಚಾರ ಬಂದ್ ಆಗಿರಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸಾರಿಗೆ ಇಲಾಖೆ ವಿರುದ್ಧ ಸಿಡಿದೆದ್ದ ಆಟೋ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿ (Taxi) ಆ್ಯಪ್ ಬ್ಯಾನ್ (App ban) , ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಬೃಹತ್ ಆಟೋ ರ್ಯಾಲಿ ಮೂಲಕ ವಿಧಾನಸೌಧ (Vidhanasoudha) ಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಈಗಾಗಲೇ ಈ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಡಿ 21ರ ಗುರುವಾರದಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ.
ಇದನ್ನು ಓದಿ :- ನಾಳೆ ಸಭಾಪತಿ ಚುನಾವಣೆ ಹಿನ್ನೆಲೆ – ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ