ಈ ದಿನದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ , ಸೇವೆಗೆ ಅವಕಾಶವಿಲ್ಲ…!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ (Kukke subramanya temple) ದಲ್ಲಿ ಚಂಪಾ ಷಷ್ಠಿ (Champa shasti) ಯಂದು ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ನವೆಂಬರ್ 20 ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಇರುವುದರಿಂದ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ ಎಂದು ಶ್ರೀ ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

ಬಳಿಕ ಮಧ್ಯಾಹ್ನ 2ಗಂಟೆಗೆ ಭಕ್ತಾದಿಗಳಿಗೆ ಶ್ರೀದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚೌತಿಯ ದಿನ ಮತ್ತು ಪಂಚಮಿ ದಿನವಾದ ನವೆಂಬರ್ 27ರಂದು ಮತ್ತು ಪಂಚಮಿಯ ದಿನವಾದ ನವೆಂಬರ್ 28ರಂದು ಭಕ್ತಾದಿಗಳ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ. ಷಷ್ಠಿ ದಿನವಾದ ನವೆಂಬರ್ 29ರಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ. ಅಲ್ಲದೆ ನವೆಂಬರ್ 29ರಂದು ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ಇದನ್ನೂ ಓದಿ : –  ಸಹೋದರಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದಕ್ಕೆ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ

ವೆಂಬರ್ 23ರ ಲಕ್ಷದೀಪೋತ್ಸವದಂದು ಮತ್ತು ಚೌತಿ, ಪಂಚಮಿ, ಷಷ್ಟಿ ದಿನದಲ್ಲಿ ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಇನ್ನು ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಪ್ರಯುಕ್ತ ನವೆಂಬರ್ 21ರಿಂದ ಡಿಸೆಂಬರ್ 5ರವರೆಗೆ ಸಂಜೆ ವೇಳೆ ನಡೆಯುವ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : – ದತ್ತಾಂಶ ಕಳವು ಬಗ್ಗೆ ಯಾವುದೇ ದೂರು ಬಂದಿದ್ದಿಲ್ಲ – ತುಷಾರ್ ಗಿರಿನಾಥ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!