ದೇವಸ್ಥಾನ ಬಳಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು. ಕೇವಲ ಹಿಂದು ಧರ್ಮೀಯರಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಧ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿ ತಂಬಾಕು, ಮಾಂಸ, ಮದ್ಯ ಮಾರಾಟಕ್ಕೆ ನಿರ್ಬಂಧಿಸಬೇಕು.
ಭಕ್ತಾದಿಗಳಿಗೆ ಪಾರ್ಕಿಂಗ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ದೇವಸ್ಥಾನ ಬಳಿ ಅನ್ಯ ಧರ್ಮೀಯ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ರು. ಕೇವಲ ಹಿಂದು ಧರ್ಮೀಯರಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಸ್ಥಳೀಯ ಶಾಸಕ ಆನಂದ ಮಾಮನಿಗೆ ಮನವಿ ಸಲ್ಲಿಸಿದ್ರು.
ಇದನ್ನು ಓದಿ :- HIJAB – ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಇಲ್ಲ ಎಂಟ್ರಿ