ಅದಾನಿ ಗ್ರೂಪ್ನಿಂದ ಷೇರುಮೌಲ್ಯ ಹೆಚ್ಚಿಸಲು ವಂಚನೆಗಳಾಗಿವೆ ಎಂಬಂತೆ ಹಿಂಡನ್ ಬರ್ಗ್ ರಿಸರ್ಚ್ ವರದಿ (Hindenburg Research Report) ಮಾಡಿದ ಬೆನ್ನಲ್ಲೇ ಭಾರತದಲ್ಲಿ ಷೇರುಪೇಟೆ ಅಲುಗಾಡಲು ಆರಂಭವಾಗಿದೆ.
Adani Enterprises makes losses in opening trade, other group firms follow suit
Read @ANI Story | https://t.co/EZWwuTYKhp#AdaniEnterprises #AdaniGroups #Business pic.twitter.com/TXknPOmzId
— ANI Digital (@ani_digital) February 2, 2023
ಜೊತೆಗೆ, ನರೇಂದ್ರ ಮೋದಿ ನೇತೃತ್ವದ ಆಳಿತಾರೂಢ ಬಿಜೆಪಿಯನ್ನು ಅಲುಗಾಡಿಸಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಇದೀಗ ಸಂಸತ್ನಲ್ಲಿ ಅದಾನಿ ಗ್ರೂಪ್ ಪ್ರಕರಣವೇ (Adani Group) ಜೋರು ಸದ್ದು ಮಾಡುತ್ತಿದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ– JPC- Joint Parliamentary Committee) ಅಥವಾ ಸಿಜೆಐ ನೇಮಿತ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಇದನ್ನುಓದಿ :- ಫೆ.11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಅಮಿತ್ ಶಾ ಭೇಟಿ…!
Adani Group-owned Ambuja Cements, ACC clarify its shares not pledged by promoters
Read @ANI Story | https://t.co/TyR9oDGOJX#ACC #Ambuja #Clarify #NotPledgedbyPromoters pic.twitter.com/DCfGa3r7UL
— ANI Digital (@ani_digital) February 2, 2023
ಸಂಸತ್ನಲ್ಲಿ ಅದಾನಿ ಗ್ರೂಪ್ ವಿಚಾರವನ್ನು ಪ್ರಸ್ತಾಪಿಸಿ ಚರ್ಚಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರದಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ ಎಂಬುದು ಕಾಂಗ್ರೆಸ್ ಮತ್ತಿತರ ಪಕ್ಷಗಳ ಆಕ್ರೋಶವಾಗಿದೆ. ಸಂಸದೀಯ ಅಧಿವೇಶನಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಜವಾದಿ ಪಕ್ಷ ಎನ್ಸಿಪಿ, ಶಿವಸೇನೆ, ಡಿಎಂಕೆ, ಟಿಎಂಸಿ, ಎಎಪಿ, ಸಿಪಿಐಎಂ ಮೊದಲಾದ ವಿಪಕ್ಷಗಳ ನಾಯಕರ ಸಭೆ ನಡೆದು ಅದಾನಿ ವಿಚಾರವನ್ನು ಚರ್ಚೆಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಅವಕಾಶ ಕಲ್ಪಿಸದೇ ಹೋಗಿದ್ದರಿಂದ ಇಂದಿನ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರು ಗಲಾಟೆ ನಡೆಸಿದ್ದಾರೆ.
ಎಸ್ಬಿಐ ಮತ್ತು ಎಲ್ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಎಲ್ಐಸಿ, ಎಸ್ಬಿಐ ಮೊದಲಾದ ಸಂಸ್ಥೆಗಳು ಈ ಕಂಪನಿಗೆ ಹಣ ಕೊಟ್ಟಿವೆ. ಇದರ ತನಿಖೆ ಆಗಬೇಕು. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಅಥವಾ ಭಾರತೀಯ ಮುಖ್ಯ ನ್ಯಾಯಮೂರ್ತಿ ಮಾರ್ಗದರ್ಶನದಲ್ಲಿ ಸಮಿತಿ ರಚನೆಯಾಗಿ ಅದರಿಂದಲಾದರೂ ತನಿಖೆ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಇದನ್ನುಓದಿ :- ಫ್ರೆ.6 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ – ಕೆ.ಬಿ ಕ್ರಾಸ್ ನಿಂದ ನಿಟ್ಟೂರುವರೆಗಿನ ಮಾರ್ಗ ಬದಲು