ಬೆಂಗಳೂರಿ (Bangalore) ನಲ್ಲಿ ಆರ್ಕಿಡ್ ಶಾಲೆ (Orchids school) ಅವಾಂತರದ ಹಿನ್ನೆಲೆಯಲ್ಲಿ 500 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಅನುಮತಿ ಇಲ್ಲದೆ ಸಿಬಿಎಸ್ಇ (CBSE) – ಐಸಿಎಸ್ ಇ ಬೋಧನೆ ನಡೆಯುತ್ತಿದೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 303 ಶಾಲೆ, ಉತ್ತರ ಜಿಲ್ಲೆಯ 200ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.
ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆಂದು ಪೋಷಕರಿಗೆ ಕೆಲವು ಶಾಲೆಗಳು ಸುಳ್ಳು ಮಾಹಿತಿ ನೀಡುತಿದ್ದರು. ಕೆಲ ಶಾಲೆ (Schools) ಗಳು 1ರಿಂದ 4ನೇ ತರಗತಿವರೆಗೂ ಕೇಂದ್ರ ಪಠ್ಯಕ್ರಮ 7ಮತ್ತು 8 ನೇ ತರಗತಿಗೆ ರಾಜ್ಯ ಪಠ್ಯಕ್ರಮ ಭೋದನೆ ನಡೆಯುತ್ತಿದೆ. ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೀಗೆ ಮಾಡುತಿದ್ದೇವೆಂದು ಕೆಲ ಶಾಲೆಗಳು ಸಮರ್ಥಿಸಿಕೊಂಡಿದೆ. ನಿಯಮ ಉಲ್ಲಂಘಿಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಮುಂದುವರೆದಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನುಓದಿ :- ಬಿಎಸ್ ವೈ ಬಗ್ಗೆ ನನಗೆ ಅಪಾರವಾದ ಗೌರವವಿದೆ, ಅನುಕಂಪವಿದೆ – ಸಿದ್ದರಾಮಯ್ಯ