ಯಾವುದೇ ಸಮಸ್ಯೆಗೂ ಬೆನ್ನು ತೋರಿಸುವ ಕೆಲಸ ನಮ್ಮ ಸರ್ಕಾರ ಮಾಡಿಲ್ಲ – ಬಸವರಾಜ್ ಬೊಮ್ಮಾಯಿ

ನಿಮ್ಮ ಮುಖದ ನಗು ನೋಡಿ ನಿಮಗಿಂತಲೂ ಹೆಚ್ಚು ಸಂತೋಷ ನನಗಾಗಿದೆ. ನೀವೆಲ್ಲಾ ಇದೇ ಬೇಡಿಕೆ ಇಟ್ಟುಕೊಂಡು 30 ವರ್ಷದಿಂದ ಕೆಲಸ ಮಾಡಿ ಕೊಂಡು ಬಂದಿದ್ದೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಿಮ್ಮ ಮುಖದ ನಗು ನೋಡಿ ನಿಮಗಿಂತಲೂ ಹೆಚ್ಚು ಸಂತೋಷ ನನಗಾಗಿದೆ. ನೀವೆಲ್ಲಾ ಇದೇ ಬೇಡಿಕೆ ಇಟ್ಟುಕೊಂಡು 30 ವರ್ಷದಿಂದ ಕೆಲಸ ಮಾಡಿ ಕೊಂಡು ಬಂದಿದ್ದೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಹೇಳಿದ್ದಾರೆ. ಬೆಳಗಾವಿಯ ಪೌರಕಾರ್ಮಿಕ (Street sweepers) ನೇಮಕಾತಿ ಆದೇಶಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀವು ಕಷ್ಟದಿಂದ ಕೆಲಸ ಮಾಡುತ್ತೀರಿ. ಈ ಕೆಲಸದಲ್ಲಿ ಮಾನಸಿಕ ಹಿಂಸೆ ಹೆಚ್ಚಿದೆ. ನೋವನ್ನ ಮರೆಯೋದಕ್ಕೆ ಏನೆಲ್ಲಾ ಮಾಡ್ತೀರಿ ಅನ್ನೊದು ಗೊತ್ತಿದೆ ಎಂದು ಮಾತಿನ ನಡುವೆ ಭಾವುಕರಾದರು.

ಕಾರಜೋಳ (Govinda karajola) ಅವರು ನಿಮ್ಮ ಸ್ಥಿತಿಗಳನ್ನು ಹೇಳುವಾಗ ಬಹಳ ನೋವಾಗುತ್ತಿತ್ತು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಆಗಿಲ್ಲ ಅಂದ್ರೆ ಅಧಿಕಾರ ಇನ್ಯಾಕೆ ಎಂದು ಪ್ರಶ್ನಿಸಿದ್ರು. ಬಜೆಟ್ (Budjet)  ನಲ್ಲಿ ನಿಮಗೆ 2000 ಸಾವಿರ ರಿಸ್ಕ್ ಅಲೊವೆನ್ಸ್ ಮಾಡಿದೆ. ಅದಕ್ಕಾಗಿ 11130 ಜನರಿಗೆ ಈ ನೌಕರಿ ಖಾಯಂ ಮಾಡಿದ್ದೇನೆ. ಕಾನೂನನ್ನ ನಿಮ್ಮ ಪರವಾಗಿ ಬದಲಾವಣೆಯನ್ನ ಮಾಡಿದ್ದೇನೆ. ಒಟ್ಟು 42 ಸಾವಿರ ಜನರು ಪೌರಕಾರ್ಮಿಕರು ಇದ್ದಾರೆ. ಅವರನ್ನೂ ಖಾಯಂ ಮಾಡುತ್ತೇವೆ. ನೀವೀಗ ಕಾರ್ಮಿಕರು ಅಲ್ಲ. ಸರ್ಕಾರಿ ಪೌರ ನೌಕರರು ಎಂದು ಹೇಳಿದರು.  ಇದನ್ನು ಓದಿ : –  ರಾಮನಗರದಲ್ಲಿ ಇವರ ಆಟ ನಡಿಯಲ್ಲ – ಅಶ್ವತ್ಥ್ ನಾರಾಯಣ್ ಗೆ ಹೆಚ್ಡಿಕೆ ತೀಕ್ಷ್ಣ ಪ್ರತಿಕ್ರಿಯೆ

ಇದೇ ವೇಳೆ ಪೌರ ಕಾರ್ಮಿಕರ ಮುಖದಲ್ಲಿ ನಿಮ್ಮ ನಗು ನೋಡಿ ನಿಮಗಿಂತ ಸಂತೋಷ ನನಗೆ ಆಗಿದೆ. ಬಹುತೇಕ 30 ವರ್ಷದಿಂದ ಈ ಬೇಡಿಕೆ ಇಟ್ಟಿದ್ರಿ. ಬೇಡಿಕೆ ಈಡೇರುವ ಭರವಸೆ ಇರ್ಲಿಲ್ಲ ಅನ್ಸುತ್ತೆ. ಇವತ್ತು ನಿಮ್ಮ ಕಣ್ಣಲ್ಲಿ ಭವಿಷ್ಯ ನೋಡಿದೆ. ವ್ಯಕ್ತಿ ಹುಟ್ಟಿದಾಗಿನಿಂದಲೂ ಬೇರೆಯವರ ಹೊಲಸನ್ನು ಕ್ಲೀನ್ ಮಾಡುವಾಗ ಎಷ್ಟು ಮಾನಸಿಕ ಹಿಂಸೆ ಪಡುತ್ತಿರಾ ಅಂತ ನನಗೆ ಗೊತ್ತಿದೆ. ನೇರವಾಗಿ ಹೊಲಸನ್ನು ತೆಗೆಯುವ ಪರಿಸ್ಥಿತಿ ಬಹಳ ಗಂಭೀರ ಇದೆ. ಬದುಕಿಗಾಗಿ ಬೇರೆಯವರ ಹೊಲಸನ್ನು ತೆಗೆಯಬೇಕು ಎಂಬ ಪ್ರಶ್ನೆ ಮೂಡುತ್ತದೆ. ನಿಮ್ಮ ಜಾಗದಲ್ಲಿ ನಾನು ಇದ್ದರೂ ನನಗೂ ಹೀಗೆ ಅನ್ಸುತ್ತೆ. ಕಾರಜೋಳ ಸಾಹೆಬ್ರು ನಿಮ್ಮ ಪರಿಸ್ಥಿತಿ ಹೇಳಿದಾಗ ನನಗೆ ಕರುಳು ಚುರ್ ಅನ್ಸುತ್ತೆ. ಬಡವರು, ದುಡಿಯುವ ವರ್ಗದ ಪರವಾಗಿ ನಿಂತರೆ ದೊಡ್ಡ ಬದಲಾವಣೆ ಸಾಧ್ಯತೆ ಇದೆ. ಮನಸ್ಸಿದ್ದರೆ ಮಾರ್ಗ, ದಿಟ್ಟ ನಿರ್ಧಾರ ತೆಗೆದುಕೊಂಡು ಬರುವಲ್ಲಿ ನಮ್ಮ ಸರ್ಕಾರ (Government) ಇದೆ. ಯಾವುದೇ ಸಮಸ್ಯೆಗೂ ಬೆನ್ನು ತೋರಿಸುವ ಕೆಲಸ ನಮ್ಮ ಸರ್ಕಾರ ಮಾಡಿಲ್ಲ. ಸರ್ಕಾರ ನಿಮ್ಮ ಜೊತೆಗೆ ಇದೆ . ಕೆಲವರು ಇದರಲ್ಲಿ ರಾಜಕಾರಣ ಮಾಡ್ತಾರೆ. ನಿಮಗೆ ಯಾರು ನ್ಯಾಯ ಕೊಡ್ತಾರೆ ಅವರ ಮೇಲೆ ನಂಬಿಕೆ ಇಟ್ಟು ಮುಂದೆ ಸಾಗಬೇಕು.

ನೀವು ಕೂಡ ಐಎಎಸ್ , ಐಪಿಎಸ್ ರೀತಿಯಲ್ಲಿ ಸರ್ಕಾರಿ ನೌಕರರೇ. ಹೀಗಾಗಿ ನಿಮ್ಮನ್ನು ಸರ್ಕಾರಿ ಪೌರ ನೌಕರರು ಅಂತ ಕರೆಯುತ್ತೇವೆ .ಹಾಗೆ ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಬೇಡಿ. ಎಂತಹ ಸಮಸ್ಯೆ ಬಂದರೂ ನಮಗೆ ತಿಳಿಸಿ. ನೀವು ಕರ್ತವ್ಯ ಮೀರಿ ಕಾಯಕ ಸೇವೆ ಮಾಡುತ್ತಿದ್ದೀರಾ. ಬರುವಂತ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯ ಇದೆ. ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ನಿಮ್ಮ ಜವಾಬ್ದಾರಿ .ಈ ಬಾರಿ ಪೌರ ಕಾರ್ಮಿಕರ ಮಕ್ಕಳು SSLC, PUC, ಹಾಗೂ ಡಿಗ್ರಿ ಪರೀಕ್ಷೆ ಬರೆಯುವ ಮಕ್ಕಳ ಡಿಟೇಲ್ಸ್ ಕೊಡಿ . ಕಾಂಪಿಟೇಟಿವ್ ಪರೀಕ್ಷೆ ಬರೆಯುವ ಮಕ್ಕಳಿಗೆ ನಮ್ಮ ವಿಶೇಷ ಯೋಜನೆ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ರು.

ಇದನ್ನು ಓದಿ : –  ತಾಯಿ ಹೀರಾಬೆನ್ ಆರೋಗ್ಯ ವಿಚಾರಿಸಲು ಅಹಮದಾಬಾದ್ ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ಮೋದಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!