ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ (H.D KUMARASWMY) ನೇತೃತ್ವದಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನಯಾತ್ರೆ ನಡೆಯುತ್ತಿದ್ದು ಇಂದು ರಾಯಚೂರು ಜಿಲ್ಲೆ ಪ್ರವೇಶಿಸಿದೆ.
ಇಂದಿನಿಂದ 5 ದಿನ ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಲಿಂಗಸುಗೂರು ತಾಲೂಕಿನ ಮೇಗಳಪೇಟೆ ಗ್ರಾಮ ಮೇಗಳಪೇಟೆಯಲ್ಲಿ ಪಂಚರತ್ನ (PANCHARATHNA)ಯಾತ್ರೆ ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾತ್ರೆ ಲಿಂಗಸಗೂರು ತಾಲೂಕಿನ ಮೇಗಳಪೇಟೆಯಲ್ಲಿ ಭರ್ಜರಿ ಸ್ವಾಗತ ಪಡೆದು, 11 ಗಂಟೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಇದನ್ನು ಓದಿ :- ಇಂದು ತುಮಕೂರಿನಲ್ಲಿ ಪ್ರಜಾಧ್ವನಿ ಸಮಾವೇಶ…!
ಬಳಿಕ 11:30 ಕ್ಕೆ ಪುರಸಭೆ ಆವರಣದ ಹಿಂಭಾಗದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಸಭೆ ಬಳಿಕ ಪಂಚರತ್ನ ಯಾತ್ರೆ ಲಿಂಗಸಗೂರಿಗೆ ಹೊರಡಲಿದೆ. ಲಿಂಗಸಗೂರು ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಬಳಿಕ ಯರಡೋಣ್ ಕ್ರಾಸ್ ಮೂಲಕ ಹಟ್ಟಿ ಪಟ್ಟಣ ಪ್ರವೇಶ ಪಡೆಯಲಿದೆ. ಸಂತೇಬಜಾರ ಆವರಣದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಬಳಿಕ ಗುರುಗುಂಟಾ ಗ್ರಾಮದಲ್ಲಿಂದು ಇಂದು ಯಾತ್ರೆ ಅಂತ್ಯವಾಗಲಿದೆ.
ಇದನ್ನು ಓದಿ :- ಮಲೆನಾಡಿನಲ್ಲಿ ಈ ವರ್ಷದ ಮೊದಲ KFD ಪ್ರಕರಣ ಪತ್ತೆ…!