ತುಮಕೂರು (Tumakuru) ಜಿಲ್ಲಾ ಕಾಂಗ್ರೆಸ್ನಲ್ಲಿ (Congress) ಅಸಮಾಧಾನ ಸ್ಫೋಟಗೊಂಡಿದೆ. , ಕುರುಬ ಸಮುದಾಯದ ಸಮಾವೇಶಕ್ಕೆ ಡಾ.ಜಿ.ಪರಮೇಶ್ವರ್ ಗೈರಾಗುವ ಮೂಲಕ ಇದು ಸಾಬೀತಾಗಿದೆ. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, (Siddaramaiah) ಡಿಕೆಶಿ ಬಂದರೂ ಪರಮೇಶ್ವರ್ ಗೈರಾಗಿದ್ದರು.
ಈ ಹಿಂದೆ ಮೇ 22ರಂದು ತುಮಕೂರಿನಲ್ಲಿ ನಡೆದಿದ ಮಡಿವಾಳ & ಅಲ್ಪಸಂಖ್ಯಾತರ ಕಾರ್ಯಕ್ರಮಕ್ಕೂ ಪರಮೇಶ್ವರ್ ಗೈರಾಗಿದ್ದರು. ಈ ಹಿಂದಿನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಿಕೆಶಿ ಬಂದರೂ ಡಾ.ಜಿ.ಪರಮೇಶ್ವರ್ ಗೈರಾಗಿದ್ದರು. ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ ಸುಮ್ನೆ ಈಶ್ವರಪ್ಪ ಕುರುಬರನ್ನ ಎಸ್ಟಿ ಮಾಡಿಸ್ದೇ ಅಂತಾರೆ. ನಾನೇ ಶಿಫಾರಸ್ಸು ಮಾಡಿ ಕಳಿಸಿದ್ದೀನಲ್ಲ ಈಶ್ವರಪ್ಪ ಅವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು. ತುಮಕೂರಿನ ಕುರುಬ ಸಮುದಾಯದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಈಗ ನಿಮ್ಮ ಕೇಂದ್ರ ಸರ್ಕಾರ ಇದೆ. ರಾಜ್ಯ ಸರ್ಕಾರ ಇದೆ. ಇದನ್ನೂ ಓದಿ : – ಬೇಟೆಯಾಡೋ ಹುಲಿಯನ್ನ ಬೋನ್ ನಲ್ಲಿ ಕೂಡಿ ಹಾಕಿದ್ರೂ ಅದು ತನ್ನ ಪ್ರವೃತ್ತಿ ಮರೆಯಲ್ಲ – ಅಪ್ಪನ ನಿರ್ಲಕ್ಷಿಸಿದವರಿಗೆ ವಿಜಯೇಂದ್ರ ತಿರುಗೇಟು
ನಿಮಗೇನಾದರೂ ಕುರುಬರ ಬಗ್ಗೆ ಕಾಳಜಿ ಇದ್ರೇ ಮಾಡಿಸಿ ನೋಡೋಣ. ನಿಮ್ಮ ಈ ನಾಟಕ ಇಡೀ ರಾಜ್ಯದ ಕುರುಬರು ಅರ್ಥ ಮಾಡಿಕೊಂಡಿದ್ದಾರೆ. ಒಂದು ಆಯೋಗ ಮಾಡಿ ರಿಪೋರ್ಟ್ ತೆಗೆದುಕೊಂಡು, ಒಂದು ವರ್ಷ ನಿದ್ದೆ ಮಾಡಿಬಿಟ್ರು. ಹಿಂದುಳಿದ ವರ್ಗಗಳಿಗೆ 33% ಮೀಸಲಾತಿ ಕೊಡಬೇಕೆಂದು ತೀರ್ಮಾನಿಸಿದ್ದೇ ನಾವು. 1995 ಇಸವಿವರೆಗೂ ಹಿಂದುಳಿದವರಿಗೆ ಅಷ್ಟು ಮೀಸಲಾತಿ ಇರಲಿಲ್ಲ. ಇವತ್ತು ಅದನ್ನೆಲ್ಲಾ ಹಾಳು ಮಾಡೋಕೆ ಹೊರಟಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು,ಇದು ಎಲ್ಲಿದೆ. ಶ್ರೀಮಂತರು ಶ್ರೀಮಂತರೇ, ಬಡವರು ಬಡವರೇ ಆಗಿದ್ದಾರೆ ಎಂದು ಕಿಡಿಕಾರಿದ್ರು. ಮಿಸ್ಟರ್ ಈಶ್ವರಪ್ಪ ನಿನಗೇನಾದ್ರು ಕುರುಬರ ಮೇಲೆ ವಿಶ್ವಾಸ ಇದ್ರೇ. ಕೇಂದ್ರ ಸರ್ಕಾರಕ್ಕೆ ಹೋಗಿ ಎಸ್ಟಿ ಸರ್ಟಿಫಿಕೇಟ್ ಕೊಡಿಸಿ ಎಂದು ಸವಾಲು ಹಾಕಿದ್ರು.
ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ