ಮಹಾರಾಷ್ಟ್ರ ವಿಧಾನಸಭೆಯಲ್ಲಿ ಲೋಕಾಯುಕ್ತ ಮಸೂದೆ (Bill) ಯನ್ನು ಅಂಗೀಕರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರನ್ನೂ ಭ್ರಷ್ಟಾಚಾರ ವಿರೋಧಿ ಓಂಬುಡ್ಸ್ ಮನ್ ವ್ಯಾಪ್ತಿಗೆ ತರಲಾಗಿದೆ. ಮಸೂದೆಯ ಪ್ರಕಾರ, ಮುಖ್ಯಮಂತ್ರಿ ವಿರುದ್ಧ ಯಾವುದೇ ತನಿಖೆಯನ್ನು ಪ್ರಾರಂಭಿಸುವ ಮೊದಲು ಲೋಕಾಯುಕ್ತರು ವಿಧಾನಸಭೆಯ ಅನುಮೋದನೆ (Approval) ಪಡೆಯಬೇಕಾಗುತ್ತದೆ.
ಮಸೂದೆಯ ನಿಬಂಧನೆಗಳ ಪ್ರಕಾರ ಅಂತಹ ಪ್ರಸ್ತಾವನೆಗೆ ಮಹಾರಾಷ್ಟ್ರ ವಿಧಾನಸಭೆ (Maharastra legislative assembly) ಯ ಒಟ್ಟು ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಅನುಮೋದನೆ ಅಗತ್ಯವಿರುತ್ತದೆ. ಮುಖ್ಯಮಂತ್ರಿ ವಿರುದ್ಧದ ಭ್ರಷ್ಟಾಚಾರ (Corruption) ದ ಆರೋಪಗಳನ್ನು ಒಳಗೊಂಡಿರುವ ಆಂತರಿಕ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ನಡೆಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಓದಿ : – ರಾಮನಗರದಲ್ಲಿ ಅಶ್ವತ್ಥ ನಾರಾಯಣ ಮಂದಿರವನ್ನೂ ಕಟ್ಟಲಿ- ಡಿಕೆಶಿ ವ್ಯಂಗ್ಯ
ಅಂತಹ ಯಾವುದೇ ವಿಚಾರಣೆಯನ್ನು ಗೌಪ್ಯವಾಗಿಡಬೇಕು ಮತ್ತು ದೂರನ್ನು ವಜಾಗೊಳಿಸಲು ಅರ್ಹವಾಗಿದೆ ಎಂದು ಲೋಕಾಯುಕ್ತರು ತೀರ್ಮಾನಕ್ಕೆ ಬಂದರೆ, ವಿಚಾರಣೆಯ ದಾಖಲೆಗಳನ್ನು ಪ್ರಕಟಿಸಬಾರದು ಅಥವಾ ಯಾರಿಗೂ ಲಭ್ಯವಾಗಬಾರದು ಎಂದು ಸಹ ಹೇಳಲಾಗಿದೆ. ಮಸೂದೆಯ ಪ್ರಕಾರ, ಲೋಕಾಯುಕ್ತ ಒಬ್ಬ ಅಧ್ಯಕ್ಷರನ್ನು ಹೊಂದಿರುತ್ತದೆ. ಅವರು ಹೈಕೋರ್ಟ್ (High court) ನ ಪ್ರಸ್ತುತ ಅಥವಾ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ. ಇದರ ಹೊರತಾಗಿ ಸುಪ್ರೀಂ ಕೋರ್ಟ್ ಅಥವಾ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರು ಇರುತ್ತಾರೆ. ಲೋಕಾಯುಕ್ತದಲ್ಲಿ ಗರಿಷ್ಠ ನಾಲ್ವರು ಸದಸ್ಯರಿದ್ದು, ಅವರಲ್ಲಿ ಇಬ್ಬರು ನ್ಯಾಯಾಂಗದ ಸದಸ್ಯರಾಗಿರುತ್ತಾರೆ.
ಇದನ್ನು ಓದಿ : – ಸಿಎಂ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ, ತೀವ್ರ ಸ್ವರೂಪಕ್ಕೆ ತಿರುಗಿದ ರೈತರ ಹೋರಾಟ