ವಿಜಯನಗರ (Vijayanagara) ದಲ್ಲಿ ತುಂಗಭದ್ರಾ ಜಲಾಶಯ (Tungabhadra dam) ಅಪಾಯ ಮಟ್ಟ ಮೀರಿ ಹರಿಯುತ್ತಿದೆ . ಅಪಾಯ ಇದ್ದರೂ ತುಂಗಭದ್ರಾ ಜಲಾಶಯದ ಬಳಿ ಜನರು ಭರ್ಜರಿಯಾಗಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಟಿ ಬಿ ಡ್ಯಾಂ ಜಲಾಶಯದ 33 ಗೇಟ್ ಓಪನ್ ಆಗಿದೆ. ಭೋರ್ಗರೆಯುವ ನದಿ ನೀರಿನ ಬ್ರಿಡ್ಜ್ ಮೇಲೆ ನಿಂತು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಪಾಯ ಮೀರಿ ನದಿ ನೀರು ಹರಿಯುತ್ತಿದ್ರೂ ಪ್ರವಾಸಿಗರು ಕ್ಯಾರೇ ಎನ್ನತ್ತಿಲ್ಲ. ಇಷ್ಟೊಂದು ಅಪಾಯ ಇದ್ದರೂ ಪ್ರವಾಸಿಗರ ನಿಯಂತ್ರಣಕ್ಕೆ ಒಬ್ಬ ಪೊಲೀಸನ್ನು ಮಾತ್ರ ಆಯೋಜಿಸಿದ್ದಾರೆ.
ಸೂಕ್ತ ಭದ್ರತೆ ಇಲ್ಲದ್ದಕ್ಕೆ ಬ್ರಿಡ್ಜ್ ಮೇಲೆ ಜನರು ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿದ್ದಾರೆ. ಸೆಲ್ಪಿ ವೇಳೆ ಏನಾದ್ರೂ ಅನಾಹುತ ಆದ್ರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಗ್ಯಾರಂಟಿ. ಇದನ್ನು ಓದಿ : – ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಮತ್ತೆ ಇಬ್ಬರ ಬಂಧನ
ಬೆಳಗಾವಿ (Belagavi) ಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರೆನ್ ಕೋಟ್, ಛತ್ರಿ ಇಲ್ಲದೇ ಮನೆಯಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತ ಬೆಳೆದ ರೈತರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಬಳ್ಳಾರಿ ನಾಲಾ ಸುತ್ತಲಿನ ಜಮೀನು ನೀರಿನಿಂದ ಜಲಾವೃತಗೊಂಡಿದೆ. ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಡಿಸಿ ನಿತೇಶ್ ಪಾಟೀಲ್ ರಜೆ ಘೋಷಿಸಿದ್ದಾರೆ. ಇಂದು ಒಂದು ದಿನ ಮಾತ್ರ ಶಾಲೆ, ಅಂಗನವಾಡಿ ಕೇಂದ್ರ ಗಳಿಗೆ ರಜೆ ಘೋಷಣೆಯಾಗಿದೆ.
ಇದನ್ನು ಓದಿ : – ಹರ್ ಘರ್ ತಿರಂಗಾದ ಬಗ್ಗೆ ಸಿದ್ದರಾಮಯ್ಯ ಎಡವಟ್ಟು ಹೇಳಿಕೆ