ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆ ಹಿನ್ನೆಲೆಯಲ್ಲಿ ಬಹುತೇಕ ಪೆಟ್ರೋಲ್ ಬಂಕ್ (Petrol bunk) ಗಳಲ್ಲಿ ನೋ ಸ್ಟಾಕ್ (NO STOCK) ಬೋರ್ಡ್ ಹಾಕಲಾಗಿದೆ. ಸಮಯಕ್ಕೆ ಸರಿಯಾಗಿ ಪೆಟ್ರೋಲ್, ಡೀಸೆಲ್ (Petrol dissel)ಸಿಗದೆ ವಾಹನ ಸವಾರರು ಪರದಾಡುತ್ತಿದ್ದಾರೆ. ತೈಲ ದರ ಏರಿಕೆಯಿಂದ ಕಂಗೆಟ್ಟಿರುವ ಸರಬರಾಜು ಕಂಪನಿಗಳು ಆರ್ಥಿಕ ಹೊರೆ ಇಳಿಸಲು ಸರಬರಾಜಿಗೆ ಮಿತಿ ಹಾಕಿವೆ. ಮಾರುಕಟ್ಟೆಯಲ್ಲಿರುವ ಬೇಡಿಕೆಯಷ್ಟು ಇಂಧನ ಪೂರೈಕೆಯಾಗ್ತಿಲ್ಲ. ರಾಜ್ಯಕ್ಕೆ ಇಂಧನ ಪೂರೈಕೆಯಾಗದೆ ಬಂಕ್ ಮಾಲೀಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹಲವು ಪೆಟ್ರೋಲ್ ಬಂಕ್ ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿದೆ. ಇದರಿಂದ ವಾಹನಗಳಲ್ಲಿ ಓಡಾಡುವ ಸವಾರರಿಗೆ ಸಮಸ್ಯೆ ಎದುರಾಗಿದೆ. ಇದನ್ನು ಓದಿ – 110 ರೂ. ದಾಟಿ ಮುನ್ನುಗ್ಗುತ್ತಿರುವ ಪೆಟ್ರೋಲ್- ಡೀಸೆಲ್ ದರ
ಮಾರುಕಟ್ಟೆಯಲ್ಲಿನ ಬೇಡಿಕೆಯಷ್ಟು ಇಂಧನ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ರಾಜ್ಯದ ನಾನಾ ಪೆಟ್ರೋಲ್ ಬಂಕ್ಗಳಲ್ಲಿ’ ನೋ ಸ್ಟಾಕ್ ಬೋರ್ಡ್ ಗೋಚರಿಸುತ್ತಿದೆ. ಇದರ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟುತ್ತಿದೆ. ಬಹುತೇಕ ಬಂಕ್ಗಳ ಬಳಿ ಸಾಮಾನ್ಯ ಪೆಟ್ರೋಲ್ ಲಭ್ಯವಾಗುತ್ತಿಲ್ಲ. ಕೇವಲ ಪ್ರೀಮಿಯಂ ಪೆಟ್ರೋಲ್ ಲಭ್ಯವಾಗುತ್ತಿದೆ. ಇದರಿಂದ ಗ್ರಾಹಕರು 111 ರೂ. ಪಾವತಿಸಿ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ – Tummoc ಆ್ಯಪ್ ಮೂಲಕ ಡಿಜಿಟಲ್ ಪಾಸ್ ಪರಿಚಯ ಮಾಡಿದ ಬಿಎಂಟಿಸಿ
ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ(BMTC) ಸಂಸ್ಥೆಗಳಿಗೆ ಇಂಧನ ಪೂರೈಕೆದಾರರು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ನೇರವಾಗಿ ಪೆಟ್ರೋಲ್ ಬಂಕ್ಗಳಿಂದ 1 ರೂ. ರಿಯಾಯಿತಿ ದರದಲ್ಲಿ ಇಂಧನ ಪಡೆಯಲು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನಿರ್ಧರಿಸಿದೆ. ಆಯಾ ಡಿಪೊ ವ್ಯಾಪ್ತಿಯ ಪೆಟ್ರೋಲ್ ಬಂಕ್ಗಳಿಗೆ ರಿಯಾಯಿತಿ ದರದಲ್ಲಿ ಇಂಧನ ಪೂರೈಸುವಂತೆ ಮನವಿಯನ್ನೂ ಮಾಡಿವೆ. ಪೆಟ್ರೋಲ್ ಅಭಾವ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ.