ಬೆಳಗಾವಿ ( BELGAVI ) ಅಧಿವೇಶನಕ್ಕೆ ಆಗಮಿಸಿದ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ( KUNIGAL RANGANATH ) ಅವರನ್ನೇ ನೀವು ಯಾರು ಎಂದು ಗೊತ್ತಿಲ್ಲ ಎಂದ ಪ್ರಸಂಗ ನಡೆಯಿತು.
ಸುವರ್ಣಸೌಧದ ( SUVARNA SOUDHA ) ವಿಐಪಿ ಗೇಟ್ ಮೂಲಕ ಅಧಿವೇಶನಕ್ಕೆ ಆಗಮಿಸಿದ್ದ ಕುಣಿಗಲ್ ರಂಗಮಾಥ್ ಸುವರ್ಣಸೌಧದ ವಿಐಪಿ ಗೇಟ್ ಮುಂದೆ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಳ್ತಿದ್ದರು. ಅಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿ ಏ ದೂರ ಸರಿಯಿರಿ ಎಂದು ಸೂಚನೆ ನೀಡಿದ್ದಾರೆ. ಇದಕ್ಕೆ, ನಾನು ಶಾಸಕನಪ್ಪ ಎಂದು ಡಾ.ರಂಗನಾಥ್ ಹೇಳುತ್ತಾ, ದೂರ ಸರಿಯುವಂತೆ ಸೂಚನೆ ಕೊಟ್ಟ ಇನ್ಸ್ ಪೆಕ್ಟರ್ ಮೇಲೆ ಗರಂ ಆದರು., ನನಗೆ ನೀವ್ಯಾರೋ ಗೊತ್ತಿಲ್ಲ ಎಂದು ಇನ್ಸ್ ಪೆಕ್ಟರ್ ಉತ್ತರಿಸಿದರು. ಇದನ್ನು ಓದಿ : – 40 ದಿನದಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದ ಶಬರಿಮಲೆ ದೇವಾಲಯ
ಇದರಿಂದ ಮತ್ತಷ್ಟು ಕೆರಳಿದ ಶಾಸಕ ರಂಗನಾಥ್, ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಬೇಕು ಎಂದರು.
ಶಾಸಕರ ಮಾತಿಗೆ,ನಾನ್ಯಾಕೆ ತಿಳಿದುಕೊಳ್ಳಬೇಕು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪ್ರತ್ಯುತ್ತರ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ, ಸಾರ್ ಹೋಗಿ ಅವರಿಗೆ ಗೊತ್ತಿಲ್ಲ ಎಂದು ಸಮಾಧಾನಪಡಿಸಿದರು. ಹಾಗಿದ್ದರೂ ಪೊಲೀಸ್ ಅಧಿಕಾರಿಯ ವರ್ತನೆಗೆ ಸಿಟ್ಟಿನಿಂದಲೇ ಸುವರ್ಣಸೌಧದ ಒಳಗೆ ಕುಣಿಗಲ್ ರಂಗನಾಥ್ ತೆರಳಿದರು.
ಇದನ್ನು ಓದಿ : – 40 ದಿನದಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದ ಶಬರಿಮಲೆ ದೇವಾಲಯ